‘ಎಮರ್ಜೆನ್ಸಿ’ ಗೊಂದಲದ ನಡುವೆ ಹೊಸ ಸಿನಿಮಾ ಘೋಷಿಸಿದ ಕಂಗನಾ ರಣಾವತ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ​​ ಕಂಗನಾ ರಣಾವತ್​​ ಅವರ ಸಿನಿಮಾ ಎಮರ್ಜೆನ್ಸಿ ಸೆಪ್ಟೆಂಬರ್​ 6ರಂದು ರಿಲೀಸ್​ ಆಗಬೇಕಿತ್ತು. ಆದ್ರೆ ಎಮರ್ಜೆನ್ಸಿ ಸಿನಿಮಾಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಗ್ರೀನ್​​​ ಸಿಗ್ನಲ್​​ ಸಿಗದೆ ಇಕ್ಕಟ್ಟಿನಲ್ಲಿ ಸಿಲುಕಿದೆ.

ಇದರ ನಡುವೆ ನಟಿ ಕಂಗನಾ ತಮ್ಮ ಮುಂದಿನ ಪ್ರಾಜೆಕ್ಟ್​​​ ಅನ್ನು ಘೋಷಿಸಿದ್ದಾರೆ. ಕಂಗನಾ ರಣಾವತ್​ ಅವರು ತಮ್ಮ ಮುಂದಿನ ಸಿನಿಮಾ ‘ಭಾರತ ಭಾಗ್ಯ ವಿಧಾತ’ ಎಂದು ಘೋಷಿಸಿದ್ದಾರೆ.

ಈ ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶಿಸಲಿದ್ದಾರೆ. ಆದಿ ಮತ್ತು ತಂಡದೊಂದಿಗೆ ನಟಿ ಕಂಗಣಾ ಪೋಸ್​ ನೀಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾ ಬಗ್ಗೆ ನಟಿ ಕಂಗನಾ, #BharatBhagyaVdhaata ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವ ಭರವಸೆ ಇದೆ. ನಿಜ ಜೀವನದ ಹೀರೋಯಿಸಂನ ಮ್ಯಾಜಿಕ್ ಅನ್ನು ದೊಡ್ಡ ಪರದೆಯ ಮೇಲೆ ಅನುಭವಿಸಿ! ಭಾರತ ಭಾಗ್ಯ ವಿಧಾತ, ಹಾಡದ ನಾಯಕರಿಗೆ ಸಿನಿಮೀಯ ಗೌರವವನ್ನು ನೀಡಲು ಸಂತೋಷವಾಗಿದೆ. ಈ ಶಿರ್ಷಿಕೆಯು ಸಿನಿಮಾದ ಮೂಲಕ ಸ್ಪೂರ್ತಿದಾಯಕ ಕಥೆಗಳಿಗೆ ಜೀವ ತುಂಬುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!