ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವಕಾಶ ಸಿಕ್ಕರೆ ಹಿಮಾಚಲದ ಮಂಡಿ ಸೀಟು ತಮ್ಮ ಮೊದಲ ಆಯ್ಕೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯವರು ಬಯಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನಸೇವೆಗಾಗಿ ತಾವು ಸ್ಪರ್ಧೆ ಮಾಡಬಹುದು ಎಂದು ಹೇಳಿದ್ದರು.
ಇದೀಗ ಕಂಗನಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷಕ್ಕೆ ಸೇರಲು ಬಯಸಿದರೆ ಸ್ವಾಗತ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಪಕ್ಷಕ್ಕೆ ಸೇರಲು ಬಯಸಿದರೆ, ಅವರು ಸ್ವಾಗತಿಸುತ್ತಾರೆ. ಅವರ ಜವಾಬ್ದಾರಿಯನ್ನು ಪಕ್ಷ ನಿರ್ಧರಿಸುತ್ತದೆ. ಮೋದಿ ನಮ್ಮ ಪಕ್ಷದ ನಾಯಕ ಮತ್ತು ಪ್ರಧಾನಿಯಾಗಿರುವುದರಿಂದ ಎಲ್ಲರೂ ಬರಬೇಕೆಂದು ನಾವು ಬಯಸುತ್ತೇವೆ. ಅವರಿಂದ ಪ್ರಭಾವಿತರಾಗಿ ದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಅವರೂ ಇದರಲ್ಲಿ ಭಾಗಿಯಾಗಲು ಬಯಸುತ್ತಾರೆ. ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಟಿಕೆಟ್ ನೀಡುವುದು ನನ್ನ ನಿರ್ಧಾರವಲ್ಲ. ಸಮಾಲೋಚನೆಯ ಪ್ರಕ್ರಿಯೆಯು ಮೂಲದಿಂದ ಉನ್ನತ ಮಟ್ಟಕ್ಕೆ ಹೋಗುತ್ತದೆ ಮತ್ತು ನಂತರ ಅದು ಸಂಸದೀಯ ಮಂಡಳಿಗೆ ಹೋಗುತ್ತದೆ. ಈ ಮಂಡಳಿಯು ಟಿಕೆಟ್ ಅನ್ನು ನಿರ್ಧರಿಸುತ್ತದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಪ್ರತಿಭಾ ಸಿಂಗ್ ಸಂಸದೆಯಾಗಿದ್ದಾರೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮ್ ಸ್ವರೂಪ್ ಶರ್ಮ ಸಂಸದರಾಗಿ ತಮ್ಮ ಕ್ಷೇತ್ರ ಉಳಿಸಿಕೊಂಡಿದ್ದರು. ಆದರೆ, 2021ರಲ್ಲಿ ಮಾರ್ಚ್‌ನಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಿಭಾ ಸಿಂಗ್, ಬಿಜೆಪಿಯ ಬ್ರಿಗೇಡಿಯರ್ ಕೌಶಾಲ್ ಠಾಕೂರ್ ಅವರನ್ನು ಸೋಲಿಸಿ ಸಂಸತ್‌ಗೆ ಆಯ್ಕೆಯಾಗಿದ್ದರು.
ಪ್ರಸುತ್ತ ಕಂಗನಾ ಚಲನಚಿತ್ರಗಳ ಬಗ್ಗೆ ಮಾತ್ರವಲ್ಲದೆ ರಾಜಕೀಯ ವಿಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ತೆರೆದಿಟ್ಟರು.
ನೀವು ಯಾವಾಗಲೂ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತೀರಿ, ರಾಹುಲ್ ಗಾಂಧಿ ಬಗ್ಗೆ ಏನು ಯೋಚಿಸುತ್ತೀರಿ ಎಂದು ಕೇಳಿದಾಗ, ಮೋದಿ ಹಾಗೂ ರಾಹುಲ್ ಇಬ್ಬರು ಎದುರಾಳಿಯಾಗಿರುವುದು ಅವರಿಗೇ ಬೇಸರ ತರಿಸಿದೆ. ಮೋದಿಗೆ ರಾಹುಲ್ ಗಾಂಧಿ ಪ್ರಬಲ ಎದುರಾಳಿಯಲ್ಲ ಎಂದನಿಸಿದೆ. ಹಾಗಾಗಿ ಅವರಿಗೆ ಸಮರ್ಥ ಹೋರಾಟ ಸಿಗುತ್ತಿಲ್ಲ ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಭವಿಷ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಹೋರಾಡಬಹುದೇ ಎಂದು ಕಂಗನಾ ಅವರನ್ನು ಕೇಳಿದಾಗ, ಹಿಮಾಚಲದಲ್ಲಿ ಅರವಿಂದ್ ಕೇಜ್ರಿವಾಲ್ ಅಥವಾ ಅವರ ಪಕ್ಷಕ್ಕೆ ಏನೂ ಸಿಗೋದಿಲ್ಲ. ಏಕೆಂದರೆ ಹಿಮಾಚಲದ ಜನರು ತಮ್ಮದೇ ಆದ ವಿದ್ಯುತ್ ಉತ್ಪಾದಿಸುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ತರಕಾರಿ ಮತ್ತಿತರ ವಿಷಯಗಳಲ್ಲಿ ನಾವೂ ಸ್ವಾವಲಂಬಿಗಳಾಗಿದ್ದೇವೆ ಹಾಗಾಗಿ ಅರವಿಂದ್ ಕೇಜ್ರಿವಾಲ್ ಅವರ ಉಚಿತ ಯೋಜನೆಯ ಮಾತು ಹಿಮಾಚಲದಲ್ಲಿ ನಡೆಯುವುದಿಲ್ಲ. ಬಿಜೆಪಿಯವರು ಅಥವಾ ಕಾಂಗ್ರೆಸ್‌ನವರು ಯಾರು ಬೇಕಾದರೂ ಆಗಬಹುದು ಎಂದಿದ್ದಾರೆ.