Thursday, March 30, 2023

Latest Posts

ಚಂದ್ರಮುಖಿ-2 ಕಂಗನಾ ಚಿತ್ರೀಕರಣ ಪೂರ್ಣ: ಲಾರೆನ್ಸ್ ಜೊತೆ ಫೋಟೋ ಕ್ಲಿಕ್ಕಿಸಿ ಭಾವನಾತ್ಮಕ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಲವು ವರ್ಷಗಳ ನಂತರ ರಜನಿಕಾಂತ್ ಅಭಿನಯದ ಚಂದ್ರಮುಖಿ ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಿದ್ದು ಗೊತ್ತೇ ಇದೆ. ಇದರಲ್ಲಿ ಲಾರೆನ್ಸ್ ಮತ್ತು ಕಂಗನಾ ರನೌತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಚಂದ್ರಮುಖಿ 2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಸಿನಿಮಾದಲ್ಲಿ ಕಂಗನಾ ಚಂದ್ರಮುಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಂದ್ರಮುಖಿ 2 ಚಿತ್ರದಲ್ಲಿನ ತನ್ನ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಲಾರೆನ್ಸ್ ಜೊತೆಗಿನ ಫೋಟೋ ಹಂಚಿಕೊಂಡ ಕಂಗನಾ. ನಾನು ಭೇಟಿಯಾದ ಬಹಳಷ್ಟು ಜನರಿಗೆ ವಿದಾಯ ಹೇಳುವುದು ಕಷ್ಟಕರವಾಗಿತ್ತು. ಲಾರೆನ್ಸ್ ಮಾಸ್ಟರ್ ಒಬ್ಬ ಶ್ರೇಷ್ಠ ನರ್ತಕ, ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಮಾತ್ರವಲ್ಲದೆ ಒಳ್ಳೆಯ ಮನುಷ್ಯ. ಸೆಟ್‌ನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕೆ, ನನ್ನನ್ನು ನಗಿಸಲು ಮತ್ತು ನನ್ನ ಹುಟ್ಟುಹಬ್ಬದಂದು ನನಗೆ ಉಡುಗೊರೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ನಿಮ್ಮೊಂದಿಗೆ ಕೆಲಸ ಮಾಡಿದ್ದು ಖುಷಿ ತಂದಿದೆ.

ಅಲ್ಲದೆ, ಸೆಟ್‌ನಲ್ಲಿ ಕೇಕ್ ಕತ್ತರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದೇನೆ.. ಚಿತ್ರ ಘಟಕದಿಂದ ಹಿಡಿದು ನಾನು ಅದ್ಭುತ ಜನರನ್ನು ಭೇಟಿ ಮಾಡಿದ್ದೇನೆ. ನಮ್ಮ ತಂಡ ನಮ್ಮ ಕುಟುಂಬ ಮತ್ತು ಸ್ನೇಹಿತರಿಗಿಂತ ಹೆಚ್ಚು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಕೆಲಸ ಮುಗಿಯಿತು ಎಂದು ಹಠಾತ್ತನೆ ಹೊರಡೋದು ಅಷ್ಟು ಸುಲಭವಲ್ಲ.

ಲಾರೆನ್ಸ್ ಬಗ್ಗೆ ಕಂಗನಾ ಪೋಸ್ಟ್ ಗೆ ಉತ್ತರಿಸಿದ ಲಾರೆನ್ಸ್.. ತುಂಬಾ ಧನ್ಯವಾದಗಳು ಮೇಡಂ. 20 ದಿನಗಳ ಮುಂಬೈ ಶೂಟಿಂಗ್‌ನಲ್ಲಿ ನಾನು ನನ್ನ ಮನೆಯ ಆಹಾರವನ್ನು ಮಿಸ್‌ ಮಾಡಿಕೊಂಡೆ. ಆದರೆ ನೀವು ನನಗಾಗಿ ನಿಮ್ಮ ಮನೆಯಿಂದ ಆಹಾರವನ್ನು ತಂದಿದ್ದೀರಿ. ನಿಮ್ಮೊಂದಿಗೆ ಕೆಲಸ ಮಾಡಲು ನನಗೂ ತುಂಬಾ ಸಂತೋಷವಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!