Tuesday, March 28, 2023

Latest Posts

`ಚಂದ್ರಮುಖಿ 2′: ಜ್ಯೋತಿಕಾರನ್ನು ಮ್ಯಾಚ್‌ ಮಾಡೋದು ತುಂಬಾ ಕಷ್ಟ ಎಂದ ಕಂಗನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2005 ರಲ್ಲಿ ತೆರೆಕಂಡ ಚಂದ್ರಮುಖಿ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ಯಶಸ್ಸನ್ನು ಕಂಡಿತು. ಚಂದ್ರಮುಖಿ ಬೇರೆ ಭಾಷೆಗಳಲ್ಲಿಯೂ ಡಬ್ ಆಗಿದ್ದು ಅಲ್ಲಿಯೂ ಯಶಸ್ವಿಯಾಯಿತು. ರಜನಿಕಾಂತ್ ಮತ್ತು ನಯನತಾರಾ ಜೋಡಿಯಾಗಿ ಈ ಚಿತ್ರದಲ್ಲಿ ಚಂದ್ರಮುಖಿ ಪಾತ್ರದಲ್ಲಿ ಜ್ಯೋತಿಕಾ ನಟಿಸಿದ್ದಾರೆ. ಚಂದ್ರಮುಖಿಯಾಗಿ ಜ್ಯೋತಿಕಾ ಅದ್ಬುತ ಅಭಿನಯ ನೀಡಿದ್ದಾರೆ. ಒಂದು ರೀತಿಯಲ್ಲಿ ಅವರ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ ಎಂದೇ ಹೇಳಬಹುದು. ಈ ಸಿನಿಮಾ ರಿಲೀಸ್ ಆಗಿ 18 ವರ್ಷಗಳ ನಂತರ ಈಗ ಸೀಕ್ವೆಲ್ ಮಾಡಲಾಗುತ್ತಿದೆ.

ಚಂದ್ರಮುಖಿ ಚಿತ್ರದ ಸೀಕ್ವೆಲ್ ನಲ್ಲಿ ಲಾರೆನ್ಸ್ ನಾಯಕನಾಗಿ ನಟಿಸುತ್ತಿದ್ದಾರೆ. ಚಂದ್ರಮುಖಿ ಪಾತ್ರವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಮಾಡಲಿದ್ದಾರೆ. ಚಂದ್ರಮುಖಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಲಿದ್ದಾರೆ ಎಂಬ ವಿಚಾರ ಗೊತ್ತಾದಾಗ ಈ ಪಾತ್ರಕ್ಕೆ ಕಂಗನಾ ರಣಾವತ್ ಸರಿಹೊಂದುವುದಿಲ್ಲ ಎಂದು ಹಲವರು ಟೀಕಿಸಿದರು. ಇದಕ್ಕೆ ಕಂಗನಾ ಕೌಂಟರ್‌ ಕೂಡಾ ಕೊಟ್ಟಿದ್ದರು. ಇದೀಗ ಕಂಗನಾ ಕೂಡಾ ಚಂದ್ರಮುಖಿ ಮತ್ತು ಜ್ಯೋತಿಕಾ ಬಗ್ಗೆ ಮಾತನಾಡಿದ್ದಾರೆ.

ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಇದು ನನಗೆ ಪ್ರೋತ್ಸಾಹದಂತಿದೆ. ಚಂದ್ರಮುಖಿ ಚಿತ್ರದಲ್ಲಿ ಜ್ಯೋತಿಕಾ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಪ್ರಸ್ತುತ ಚಂದ್ರಮುಖಿ 2 ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುತ್ತಿದ್ದೇವೆ. ಹಾಗಾಗಿ ಈಗ ಪ್ರತಿ ದಿನ ಚಂದ್ರಮುಖಿ ಸಿನಿಮಾ ಹಾಗೂ ಅವರ ಅಭಿನಯ ನೋಡುತ್ತೇನೆ. ಅವರು ಚಂದ್ರಮುಖಿ ಚಿತ್ರದಲ್ಲಿ ಅಸಾಧಾರಣ ಅಭಿನಯ ನೀಡಿದರು. ಅವರಿಗೆ ಹೋಲಿಸಿದರೆ ಈಗ ನನಗೆ ನಟಿಸುವುದು ತುಂಬಾ ಕಷ್ಟ ಎಂದು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!