Thursday, March 23, 2023

Latest Posts

ಯಲಹಂಕ ವಾಯುನೆಲೆಯಲ್ಲಿ ಮೋದಿ: ಸೇನಾ ಹೆಲಿಕಾಪ್ಟರ್‌ಗಳಿಂದ ಪ್ರಧಾನಿಗೆ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನ 14ನೇ ಆವೃತ್ತಿಯ ಏರ್‌ ಶೋ ಕಣ್ಮನ ಸೆಳೆಯಲಿದೆ. ಯಲಹಂಕದ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಸೇನಾ ಹೆಲಿಕಾಪ್ಟರ್‌ಗಳು ಪ್ರಧಾನಿ ಮೋದಿಗೆ ಗೌರವ ಸೂಚಿಸಿವೆ.

ತೇಜಸ್‌, ಸೂರ್ಯಕಿರಣ್‌ ಸಾರಂಗ ಕಡೆ ಪ್ರಧಾನಿ ಮೋದಿ ಕೈ ಬೀಸಿದರು. ಬಾನಗಂಳದಲ್ಲಿ ಕೆಲ ನಿಮಿಷಗಳ ಕಾಲ ಮಿಗ್‌, ಸುಖೋಯ್‌ ಮುಂತಾದ ಲೋಹದ ಹಕ್ಕಿಗಳು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿದವು.

ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!