ಚಂದ್ರಮುಖಿ ಪಾತ್ರದಲ್ಲಿ ಮಣಿಕರ್ಣಿಕಾ: ಕುತೂಹಲದಲ್ಲಿ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಚಂದ್ರಮುಖಿ’ ಚಿತ್ರ ಎಂತಹ ಕ್ರೇಜ್ ಮೂಡಿಸಿತ್ತು ಎಂಬುದು ಎಲ್ಲರಿಗೂ ಗೊತ್ತು. ಈ ಚಿತ್ರವನ್ನು ಪಿ.ವಾಸು ನಿರ್ದೇಶಿಸಿದ್ದು, ಜ್ಯೋತಿಕಾ ಅಭಿನಯ ಈ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ವಿಶೇಷವಾಗಿ ಚಂದ್ರಮುಖಿ ಪಾತ್ರದಲ್ಲಿ ಆಕೆಯ ನಟನೆಯಿಂದ ಪ್ರೇಕ್ಷಕರು ಪ್ರಭಾವಿತರಾಗಿದ್ದರು. ಆದರೆ ಈಗ ಬಹಳ ದಿನಗಳ ನಂತರ ನಿರ್ದೇಶಕ ಪಿ.ವಾಸು ಈ ಸಿನಿಮಾದ ಸೀಕ್ವೆಲ್ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.

ಈಗಾಗಲೇ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಆದರೆ ‘ಚಂದ್ರಮುಖಿ-2’ ಶೀರ್ಷಿಕೆಯ ಈ ಸೀಕ್ವೆಲ್ ಸಿನಿಮಾದಲ್ಲಿ ರಾಘವ ಲಾರೆನ್ಸ್ ನಾಯಕನಾಗಿ ನಟಿಸುತ್ತಿದ್ದಾರೆ. ಏತನ್ಮಧ್ಯೆ, ಈ ಚಿತ್ರದಲ್ಲಿ ಸ್ಟಾರ್ ಬ್ಯೂಟಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಈ ಬಾರಿ ಚಂದ್ರಮುಖಿ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ. ಈ ಸುದ್ದಿಯೊಂದಿಗೆ ಒಮ್ಮಿಂದೊಮ್ಮೆಲೇ ಚಂದ್ರಮುಖಿ-2 ಸಿನಿಮಾದ ಚರ್ಚೆ ಜೋರಾಗಿದೆ. ಬಾಲಿವುಡ್ ನಲ್ಲಿ ಸದಾ ವಿವಾದಗಳಲ್ಲಿ ಸಿಲುಕುವ ಈ ಸ್ಟಾರ್ ಹೀರೋಯಿನ್ ಈ ಬಾರಿ ತಮ್ಮ ನಟನೆಯ ವಿಶ್ವ ರೂಪವನ್ನು ತೋರಿಸುವುದು ಖಚಿತವಾಗಿದೆ.

ಅದೇನೇ ಇರಲಿ ಕಂಗನಾ ನಿಜವಾಗಿ ಚಂದ್ರಮುಖಿಯಂತಹ ಪಾತ್ರದಲ್ಲಿ ನಟಿಸಿದರೆ ಅವರ ಅಭಿಮಾನಿಗಳಿಗೆ ಹಬ್ಬ. ಆಕೆಯ ಅಭಿನಯವನ್ನು ನಾವು ಈಗಾಗಲೇ ನೋಡಿದ್ದೇವೆ. ಚಂದ್ರಮುಖಿಯಾಗಿ ಮೂಡಿಬರುತ್ತಿರುವ ಕಂಗನಾ ಯಾವ ರೇಂಜ್ ನಲ್ಲಿ ಪ್ರೇಕ್ಷಕರನ್ನು ಹೆದರಿಸುತ್ತಾರೋ ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!