ಸಂಗಾತಿಯನ್ನು ಕ್ಷಮಿಸಲಾಗದೇ ಕಷ್ಟಪಡುತ್ತಿದ್ದೀರಾ? ಅವರನ್ನು ಯಾಕೆ ಕ್ಷಮಿಸಬೇಕು? ಇಲ್ಲಿದೆ ಕಾರಣಗಳು..

ಸಂಬಂಧದಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಆ ತಪ್ಪನ್ನು ಅಲ್ಲಿಗೇ ಬಿಟ್ಟು ಮುಂದುವರಿಯುವುದೂ ತಪ್ಪು. ಹಾಗಂತ ಅದನ್ನೇ ಮುಂದುವರಿಸಿಕೊಂಡು ಹೋಗುವುದೂ ತಪ್ಪು. ಎಲ್ಲದಕ್ಕೂ ಸಮಯ ನೀಡಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ಜಾಣ್ಮೆ. ನಿಮ್ಮ ಸಂಗಾತಿಯನ್ನು ಹೇಗೆ ಕ್ಷಮಿಸಬೇಕು, ಏಕೆ ಕ್ಷಮಿಸಬೇಕು ಇಲ್ಲಿದೆ ಕಾರಣ..

  • ಭಾವನೆಗಳ ಬಗ್ಗೆ ಮಾತನಾಡಿ. ಮಾತನಾಡದೇ ಮನಸ್ಸಿನಲ್ಲಿ ಇಟ್ಟುಕೊಂಡರೆ ಮನಸ್ಸು ಕಸದಬುಟ್ಟಿಯಾಗುತ್ತದೆ. ಎಲ್ಲಾ ಕಸ ಒಂದಲ್ಲಾ ಒಂದು ದಿನ ಹೊರಗೆ ಎಸೆಯಲೇಬೇಕಲ್ವಾ?
  • ಸಂಗಾತಿಯಿಂದ ಯಾವ ವಿಷಯಕ್ಕೆ ಬೇಜಾರಾಗಿದೆ. ಆದರೆ ಯಾವಾಗಲೂ ಅವರು ಹಾಗೆ ಮಾಡುತ್ತಾರಾ? ನಿಮ್ಮ ಸಂಬಂಧದ ಪಾಸಿಟಿವ್ ವಿಚಾರಗಳ ಬಗ್ಗೆ ಆಲೋಚಿಸಿ
  • ಸರಣಿ ತಪ್ಪುಗಳು ಆಗಿವೆ ಎನಿಸಿದರೆ ಮೊದಲು ಸಣ್ಣ ತಪ್ಪಿನಿಂದ ಕ್ಷಮಿಸುತ್ತಾ ಬನ್ನಿ.
  • ನಿಮ್ಮನ್ನು ನೀವು ಅಯ್ಯೋ ಪಾಪ ಎನ್ನುವುದನ್ನು ನಿಲ್ಲಿಸಿ. ನಿಮ್ಮನ್ನು ನೀವು ಮೊದಲು ಕ್ಷಮಿಸಿಕೊಂಡು ಒಂದು ನಿರ್ಧಾರಕ್ಕೆ ಬನ್ನಿ. ಆಗ ಮಾತ್ರ ನಿಮಗೆ ಒಂದು ದೃಷ್ಟಿಕೋನ ಕಾಣಸಿಗುತ್ತದೆ.
  • ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ. ನೋವಾಗಿದೆ ಹೌದು, ಕಣ್ಣೀರು ಬರುತ್ತಿದೆ ಸರಿ. ಸಮಯ ನೀಡಿ, ವಾಸಿ ಮಾಡಿಕೊಳ್ಳಿ.
  • ನಿಮ್ಮ ಕೆಲವು ರೀತಿ ನೀತಿ ಅವರಿಗೆ ಹಿಡಿಸದೇ ಇರಬಹುದು, ಅವರದ್ದು ನಿಮಗೆ ಇದರಲ್ಲಿಯೇ ನೀವು ಬದುಕಬೇಕು. ಹಾಗಾಗಿ ಒಬ್ಬರನ್ನೊಬ್ಬರು ಒಪ್ಪಿಕೊಳ್ಳಿ.
  • ತಾಳ್ಮೆ ಇರಲಿ. ಸಂಬಂಧ ಉಳಿಯಲು ಬೆಳೆಯಲು ಒಂದೇ ಸಾಧನ. ಅದು ತಾಳ್ಮೆ. ಎಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಸಿಟ್ಟಿನಲ್ಲಿ ರಾತ್ರಿ ಮಲಗಬೇಡಿ. ಯಾವುದೇ ಜಗಳ, ಮನಸ್ತಾಪ ಆಗಿರಲಿ. ರಾತ್ರಿ ಒಳಗೆ ಮುಗಿಯಲಿ. ಬೆಳಗ್ಗೆ ಎದ್ದಾಗ ಫ್ರೆಶ್ ಮೂಡ್ ನಿಮ್ಮದಾಗಿರಲಿ.
  • ಸಿಟ್ಟು ಬಂದಿದೆ ಎಂದಾದರೆ ಸ್ವಲ್ಪ ಸಮಯ ಮಾತನಾಡಬೇಡಿ. ಆ ಜಾಗದಲ್ಲೇ ಇರಬೇಡಿ. ನಂತರ ಮಾತನಾಡಿ, ಕೋಪದಲ್ಲಿ ಬುದ್ಧಿ ನಮ್ಮ ಕೈಲಿ ಇರುವುದಿಲ್ಲ.
  • ಆಗಿನದ್ದು ಆಗೇ ಮುಗಿಸಿಕೊಳ್ಳಿ. ಮೊನ್ನೆ ಹಾಗೆ ಹೇಳಿದ್ದೆ, ಹೋದ ತಿಂಗಳು ಹೀಗೆ ಮಾಡಿದ್ದೆ. ಈ ಲಗೇಜ್ ಮನಸ್ಸನ್ನು ಹಾಳುಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!