ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದೋರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ದಿನ ಭರ್ಜರಿ ಪ್ರದರ್ಶನ ನೀಡಿದ್ದ ಕಾಂಗರೂ ತಂಡ ಇಂದು ಮಂಕಾಗಿದೆ.
ಎರಡನೇ ದಿನ ಉಮೇಶ್ ಯಾದವ್ ಹಾಗೂ ಅಶ್ವಿನ್ ಬೌಲಿಂಗ್ ದಾಳಿಗೆ ಆಸೀಸ್ ಪಡೆ ನಲುಗಿದ್ದು, 197ರನ್ಗೆ ಮೊದಲ ಇನ್ನಿಂಗ್ಸ್ನ್ನು ಮುಗಿಸಿದೆ.
ಈ ಮೂಲಕ ಭಾರತ ವಿರುದ್ಧ 88 ರನ್ಗಳ ಮುನ್ನಡೆಯನ್ನು ಸಾಧಿಸಿದೆ. ಎರಡನೇ ದಿನ ಕೇವಲ 11 ರನ್ ಅಂತರದಲ್ಲಿ ಆರು ವಿಕೆಟ್ಗಳನ್ನು ಕಳೆದುಕೊಂಡಿದೆ.