Thursday, March 23, 2023

Latest Posts

SPORTS| ವಿಶ್ವಕಪ್ ತಂಡದ ಆಟಗಾರರಿಗಾಗಿ 35 ಚಿನ್ನದ ಐಫೋನ್‌ ಖರೀದಿಸಿದ ಮೆಸ್ಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ವರ್ಷ ನಡೆದ ಫಿಫಾ ವಿಶ್ವಕಪ್‌ನಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾವನ್ನು ಗೆಲುವಿನತ್ತ ಮುನ್ನಡೆಸಿದ್ದರು. ದೇಶಕ್ಕಾಗಿ ವಿಶ್ವಕಪ್ ಗೆದ್ದುಕೊಟ್ಟರು. ಈ ಯಶಸ್ಸಿನಲ್ಲಿ ತಂಡದ ಇತರ ಆಟಗಾರರು ಮತ್ತು ಸಿಬ್ಬಂದಿಯ ಸಹಕಾರವೂ ಹೆಚ್ಚಿದೆ.

ಅದಕ್ಕಾಗಿಯೇ ಅವರೆಲ್ಲರಿಗೂ ಉಡುಗೊರೆ ನೀಡಲು ಮೆಸ್ಸಿ ಸಿದ್ಧರಾಗಿದ್ದು, ತಮ್ಮ ಸಹ ಆಟಗಾರರು ಮತ್ತು ವಿಶ್ವಕಪ್ ವಿಜೇತ ತಂಡದ ಸಿಬ್ಬಂದಿಗೆ ಚಿನ್ನದ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಇದಕ್ಕಾಗಿ ಅವರು 35 ಚಿನ್ನದ ಐಫೋನ್‌ಗಳನ್ನು ಆರ್ಡರ್ ಮಾಡಿದ್ದಾರೆ. ಪ್ರತಿ ಫೋನ್‌ನಲ್ಲಿ ಆಟಗಾರನ ಹೆಸರು, ಜರ್ಸಿ ಸಂಖ್ಯೆ ಮತ್ತು ಅರ್ಜೆಂಟೀನಾ ಲೋಗೋವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಮೆಸ್ಸಿ ಈಗಾಗಲೇ ಈ ಫೋನ್‌ಗಳನ್ನು ಸ್ವೀಕರಿಸಿದ್ದಾರೆ.

ಮೆಸ್ಸಿ ತನ್ನ ತಂಡ ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ವಿಶ್ವಕಪ್ ವಿಜಯವನ್ನು ಆಚರಿಸುತ್ತಿದ್ದಾರೆ. ಬೆನ್ ಸಲಹೆಯ ಮೇರೆಗೆ ಮೆಸ್ಸಿ ಚಿನ್ನದ ಐಫೋನ್‌ಗಳನ್ನು ಕೊಡಲು ನಿರ್ಧರಿಸಿದ್ದಾರಂತೆ. ಮೆಸ್ಸಿ ಆರ್ಡರ್ ಮಾಡಿರುವ ಫೋನ್‌ಗಳ ಒಟ್ಟು ಮೌಲ್ಯ ಸುಮಾರು 1.7 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!