ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೂರ್ಯ ಅಭಿನಯದ ಕಂಗುವ ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಗಳಿಕೆ ಆಗಿಲ್ಲ. ಅಭಿಮಾನಿಗಳು ಸೂರ್ಯ ನಟನೆಯನ್ನು ಮೆಚ್ಚಿದ್ದಾರೆ, ಆದರೆ ಸಿನಿಮಾ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ.
‘ಕಂಗುವ’ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ. ಆದರೆ, ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 22 ಕೋಟಿ ರೂಪಾಯಿ. ಭಾರತದಲ್ಲಿ ಇಷ್ಟೊಂದು ಕಡಿಮೆ ಗಳಿಕೆ ಮಾಡಿರುವುದರಿಂದ ಚಿತ್ರಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇದೆ. ಈ ಸಿನಿಮಾ ತಮಿಳಿನಲ್ಲಿ ಮಾತ್ರವಲ್ಲದೆ, ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲೂ ರಿಲೀಸ್ ಆಗಿದೆ. ಆದಾಗ್ಯೂ ಚಿತ್ರವು ಉತ್ತಮ ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ.
ನಟ ಸೂರ್ಯ ಅವರಿಗೆ ಇರೋ ಕ್ರೇಜ್ ತುಂಬಾನೇ ದೊಡ್ಡದು. ಅವರ ನಟನೆಯ ‘ಕಂಗುವ’ ಸಿನಿಮಾ ಮೇಲೂ ಭರ್ಜರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಸಿನಿಮಾಗೆ ಎಲ್ಲ ಕಡೆಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಜನರು ಸಿನಿಮಾ ನೋಡಲು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ತಮಿಳುನಾಡಿನಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿಲ್ಲ.