Wednesday, August 17, 2022

Latest Posts

ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ: ಆರೋಪಿಗಳನ್ನು ಎನ್‌ಐಎ ಕಸ್ಟಡಿಗೆ ನೀಡಿದ ನ್ಯಾಯಾಲಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದಯಪುರ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಎನ್‌ಐಎ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳನ್ನ ಜುಲೈ 12ರವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ.
ಉದಯಪುರ ಕೊಲೆ ಪ್ರಕರಣದ ಆರೋಪಿ ರಿಯಾಜ್, ಎಂ.ಡಿ. ಗೌಸ್, ಮೊಹ್ಸಿನ್ ಮತ್ತು ಆರಿಫ್ʼನನ್ನ ಜುಲೈ 12ರವರೆಗೆ ಕಸ್ಟಡಿಗೆ ಒಪ್ಪಿಸಲಾಗಿದೆ.
ಉದಯಪುರ ಕೊಲೆ ಪ್ರಕರಣದ ಆರೋಪಿಗಳನ್ನ ಎನ್‌ಐಎ ಶನಿವಾರ ವಶಕ್ಕೆ ತೆಗೆದುಕೊಂಡಿತ್ತು. ಈ ಘಟನೆಯ ಪ್ರಮುಖ ಇಬ್ಬರು ಆರೋಪಿಗಳನ್ನ ಅಜ್ಮೀರ್ನ ಹೈ ಸೆಕ್ಯೂರಿಟಿ ಜೈಲಿನಿಂದ ಜೈಪುರಕ್ಕೆ ಕರೆತಂದು ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದಕ್ಕೂ ಮೊದಲು, ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಶುಕ್ರವಾರ ಬಿಗಿ ಭದ್ರತೆಯ ನಡುವೆ ಅಜ್ಮೀರ್ ಹೈ ಸೆಕ್ಯೂರಿಟಿ ಜೈಲಿಗೆ ಕರೆತರಲಾಗಿತ್ತು.
ರಾಜಸ್ತಾನದ ಉದಯಪುರದ ಕನ್ಹಯ್ಯಾ ಲಾಲ್ ಎಂಬ ಟೈಲರ್‌ʼನನ್ನ ಇಬ್ಬರು ಕಿರಾಕರು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!