ಕನ್ನಡ ಬಿಗ್​ ಬಾಸ್: ದೊಡ್ಮನೆಯಿಂದ ಹೊರಬಂದ ಪ್ರಶಾಂತ್‌ ಸಂಬರ್ಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಬಿಗ್​ ಬಾಸ್​ ಸೀಸನ್​ 9’ ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಹೀಗಿರುವಾಗ ದೊಡ್ಮನೆಯಿಂದ ಒಬ್ಬೊಬರಾಗಿ ಸ್ಪರ್ಧಿಗಳು ಹೊರ ಹೋಗುತ್ತಿದ್ದಾರೆ. ಇದೀಗ ಈ ವಾರ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ.
ಪ್ರಶಾಂತ್‌ ಸಂಬರ್ಗಿ ಅವರಿಗೆ ಈ ಹಿಂದಿನದಕ್ಕಿಂತ ಕಡಿಮೆ ಓಟುಗಳು ಬಂದಿದ್ದರಿಂದ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ.
ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ವಿಚಾರವಾಗಿ ಪ್ರಶಾಂತ್‌ ಸಂಬರ್ಗಿ ಅವರು ಹೆಚ್ಚು ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಗ್​ ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಂಡಿದ್ದರು.
ಬಿಗ್​ ಬಾಸ್​ ಸೀಸನ್​ 9ರಲ್ಲಿ ಪ್ರಶಾಂತ್ ಸಂಬರ್ಗಿ ಅವರಿಗೆ ಮತ್ತೆ ಚಾನ್ಸ್​ ಸಿಕ್ಕಿತು. ಇದು ಕೆಲವರಲ್ಲಿ ಖುಷಿ ಮೂಡಿಸಿದರೆ, ಮತ್ತೆ ಕೆಲವರಲ್ಲಿ ಬೇಸರ ಉಂಟುಮಾಡಿತ್ತು. ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಬಿಗ್​ ಬಾಸ್​ ಮನೆಯ ಪ್ರತಿ ಸದಸ್ಯನಿಗೂ ಟಫ್ ಕಂಟೆಸ್ಟಂಟ್ ಆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!