ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ ಪರಿಶೀಲನೆ ನಡೆಸಿದ ಕನ್ನಡ -ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್

ಹೊಸ ದಿಗಂತ ವರದಿ , ಹಾವೇರಿ :

ಹಾವೇರಿಯಲ್ಲಿ ಜರಗುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ ನಿರ್ಮಾಣ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ ನಿಟ್ಟಾಲಿ ಪರಿಶೀಲನೆ ನಡೆಸಿದರು.

ಹಾವೇರಿ ನಗರದ ಹೊರವಲಯದ ಅಜ್ಜಯ್ಯನ ದೇವಾಲಯ ಎದುರಿನ ವಿಶಾಲ ಜಮೀನಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮ್ಮೇಳನದ ಮುಖ್ಯವೇದಿಕೆ, ಪ್ರದರ್ಶನ ಮಳಿಗೆಗಳು. ವಿಐಪಿ ಗ್ಯಾಲರಿ ಪುಸ್ತಕ ಮಳಿಗೆಗಳು. ನೊಂದಣಿ ಕೌಂಟರ್ ವೀಕ್ಷಸಿ ಎಂ.ಸಿ ಅಂಡ್ ಎ ವ್ಯವಸ್ಥಾಪಕರಿಂದ ಮಾಹಿತಿ ಪಡೆದುಕೊಂಡರು.
ಡಿಸೆಂಬರ್ ಮೂವತ್ತೊಂದರೊಳಗಾಗಿ ವೇದಿಕೆ ಕಾಮಗಾರಿ ಪೂರ್ಣಗೊಳಿಸಿ ಸಜ್ಜು ಗೊಳಿಸುವಂತೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮ್ಮೇಳನದ ವಿವಿಧ ಸಮಿತಿಗಳ ಸದಸ್ಯಕಾರ್ಯದರ್ಶಿಗಳ ಸಭೆ ನಡೆಸಿ ಸಮಿತಿವಾರು ಮಾಹಿತಿ ಪಡೆದು ಕೊಂಡರು. ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಯ್ಯ ಪೂಜಾರಿ ವಿವಿಧ ಸಮಿತಿ ಸದಸ್ಯ ಕಾರ್ಯದರ್ಶಿಗಳು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!