Friday, July 1, 2022

Latest Posts

ಟಾಲಿವುಡ್‌ನಲ್ಲಿ ಕನ್ನಡ ನಟಿಮಣಿಯರ ದರ್ಬಾರ್‌…ಇದೀಗ ಕೆಜಿಎಫ್‌ ಬೆಡಗಿಯ ಸರದಿ..!?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಬ್ಬರ ನಂತರ ಒಬ್ಬರು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡ ಬೆಡಗಿಯರ ಹವಾ ಬಲು ಜೋರಾಗೇ ಇದೆ. ಬುಟ್ಟಬೊಮ್ಮ, ಕ್ರಷ್ಮಿಕಾ, ಬೇಬಮ್ಮ, ಶ್ರೀಲೀಲಾ ಹವಾ ಇರುವಾಗಲೇ ಮತ್ತೊಬ್ಬ ನಟಿ ಟಾಲಿವುಡ್‌ ಅಂಗಳಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಹೀರೋಗಳು ಆಫರ್‌ ನೀಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಹೀರೋಗಳ ಜೊತೆ ಕನ್ನಡ ಬೆಡಗಿಯರದ್ದೇ ಕಾರುಬಾರು. ಅಲ್ಲಿನ ಪ್ರೇಕ್ಷಕರು ಕೂಡ ಕನ್ನಡದ ನಾಯಕಿಯರನ್ನು ಒಪ್ಪಿಕೊಂಡಿದ್ದಾರೆ. ಕನ್ನಡದ ಮಣ್ಣು, ನೀರು, ಗಾಳಿಯಲ್ಲಿ ಅಂದವೇ ತುಂಬಿದೆ. ಅದಕ್ಕಾಗಿಯೇ ಅಲ್ಲಿನ ಹೆಣ್ಣುಮಕ್ಕಳು ಅಷ್ಟು ಸುಂದರವಾಗಿರುತ್ತಾರೆ ಎಂಬ ಟಾಕ್‌ ಕೂಡ ಇದೆ. ಬುಟ್ಟಬೊಮ್ಮ ಪೂಜಾಹೆಗ್ಡೆ ಉತ್ತಮ ಫಾರ್ಮ್‌ ಗಿಟ್ಟಿಸಿಕೊಂಡಿದ್ದಾರೆ. ಬ್ಲಾಕ್‌ಬಸ್ಟರ್‌ ಚಿತ್ರಗಳೊಂದಿಗೆ ರಶ್ಮಿಕಾ ನ್ಯಾಷನಲ್‌ ಕ್ರಶ್‌ ಆಗಿದ್ದಾರೆ. ಅದೇ ರೇಂಜ್‌ನಲ್ಲಿ ಕೃತಿ ಶೆಟ್ಟಿ ಹಾಗೂ ಶ್ರೀಲೀಲಾ ಕೂಡಾ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಕೆಜಿಎಫ್‌ ಬೆಡಗಿ ಕೂಡ ಸೇರಿದ್ದಾರೆ ಎನ್ನಲಾಗುತ್ತಿದೆ.

ಪ್ಯಾನ್‌ ಇಂಡಿಯಾ ಸಿನಿಮಾದಿಂದಾಗಿ ಒಳ್ಳೆಯ ಕ್ರೇಜ್‌ ಹುಟ್ಟಿಹಾಕಿರುವ ಕೆಜಿಎಫ್‌ ಬೆಡಗಿಗೆ ತೆಲುಗಿನಲ್ಲಿ ಆಫರ್‌ಗಳ ಸುರಿಮಳೆ ಇದೆಯಂತೆ. ಟಾಲಿವುಡ್ ಬಿಗ್ ಮೂವಿ ಆಫರ್ ಗಳು ಶ್ರೀನಿಧಿ ಮನೆ ಬಾಗಿಲು ತಟ್ಟುತ್ತಿರುವಂತಿದೆ. ಮಹೇಶ್ ಬಾಬು, ತ್ರಿವಿಕ್ರಮ್ ಚಿತ್ರದ ಜೊತೆಗೆ ತಾರಕ್ – ಕೊರಟಾಲ ಶಿವ ಸಿನಿಮಾ ನಿರ್ಮಾಣದ ಬಗ್ಗೆ ಮಾತುಕತೆಗೆ ಸಂಪರ್ಕ ಮಾಡಿದ್ದಾರಂತೆ. ಇದೇ ರೀತಿ ನಡೆದರೆ ಈಗಾಗಲೇ ಟಾಲಿವುಡ್ ನಲ್ಲಿರುವ ಪೂಜಾ, ರಶ್ಮಿಕಾ, ಕೃತಿಗೆ ಪೈಪೋಟಿ ಗ್ಯಾರೆಂಟಿ ಅಂತಿದೆ ಸಿನಿ ರಂಗ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss