ಸಿನಿ ಪರಿಶ್ರಮದಲ್ಲಿ ಕನ್ನಡ ಬೆಡಗಿಯರ ಹವಾ: ಹಿರಿಯರಿಂದ ಕಿರಿಯರವರೆಗೂ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲ್ಲಾ ಚಿತ್ರರಂಗದಲ್ಲೂ ಕನ್ನಡದ ನಾಯಕಿಯರದ್ದೇ ಹವಾ ಆಗಿದೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸೌಂದರ್ಯ ಅವರಿಂದ ಹಿಡಿದು ಅನುಷ್ಕಾ ಶೆಟ್ಟಿ, ಈಗ ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿವರೆಗೆ ಎಲ್ಲಾ ಇಂಡಸ್ಟ್ರಿಗಳಲ್ಲಿ ಕನ್ನಡ ಬೆಡಗಿಯರದ್ದೇ ಕಮಾಲ್‌ ಆಗಿದೆ.ಬಹುತೇಕ ನಾಯಕಿಯರು ಕರ್ನಾಟಕದಿಂದ ಅದರಲ್ಲೂ ಮಂಗಳೂರಿನವರೇ ಆಗಿದ್ದಾರೆ.

ರಶ್ಮಿಕಾ, ಪೂಜಾ ಹೆಗ್ಡೆ ಪ್ರಸ್ತುತ ಟಾಲಿವುಡ್‌ನ ಟಾಪ್ ನಾಯಕಿಯರಲ್ಲಿ ಒಬ್ಬರು. ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ  ಬ್ಯುಸಿಯಾಗಿದ್ದಾರೆ. ಚಲೋ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ರಶ್ಮಿಕಾ, ಗೀತ ಗೋವಿಂದಂ, ಡಿಯರ್ ಕಾಮ್ರೇಡ್, ಭೀಷ್ಮ, ಸರಿಲೇರು ನೀಕೆವ್ವರು, ಪುಷ್ಪ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ನಾಯಕಿಯಾಗಿದ್ದಾರೆ.

ಒಕ ಲೈಲಾ ಕೋಸಂ ಚಿತ್ರದ ಮೂಲಕ ತೆಲುಗು ಚಿತ್ರಕ್ಕೆ ಪರಿಚಯವಾದ ಬುಟ್ಟಬೊಮ್ಮ ದುವ್ವಾಡ ಜಗನ್ನಾಥಂ ಚಿತ್ರದ ಮೂಲಕ ಉತ್ತಮ ಬ್ರೇಕ್ ಪಡೆದರು. ಅದಾದ ನಂತರ ಪ್ರಭಾಸ್, ಮಹೇಶ್‌ ಬಾಬು ಹೀಗೆ ಟಾಪ್‌ ಹೀರೋಗಳ ಜೊತೆ ನಟಿಸಿ ಎಲಲಾ ಭಾಷೆಗಳಲ್ಲೂ ಸಿನಿಮಾ ಮಾಡುತ್ತಿದ್ದಾರೆ.

ಕೆಜಿಎಫ್‌ ನಾಯಕ ಶ್ರೀನಿಧಿ ಶೆಟ್ಟಿ ಒಂದೇ ಒಂದು ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ನಾಯಕರಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ವಿಕ್ರಮ್ ಜೊತೆ ತಮಿಳು ಸಿನಿಮಾ ಕೋಬ್ರಾದಲ್ಲಿ ನಟಿಸುತ್ತಿದ್ದಾರೆ.

ಈಗ ಫುಲ್ ಫಾರ್ಮ್‌ನಲ್ಲಿರುವ ಕನ್ನಡದ ನಾಯಕಿ ಕೃತಿ ಶೆಟ್ಟಿ. ಉಪ್ಪೆನ ಮೂಲಕ ತೆಲುಗಿಗೆ ಬಂದ ನಟಿ ನಾನಿ ಜೊತೆ ಶ್ಯಾಮ್ ಸಿಂಗರಾಯ್ ಮತ್ತು ಚೈತು ಜೊತೆ ಬಂಗಾರರಾಜು ಸಿನಿಮಾ ಸಖತ್‌ ಹಿಟ್ ಆದವು. ಈಗ ವಾರಿಯರ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು,ಕಾಲಿವುಡ್‌, ಮಾಲಿವುಡ್‌ನಲ್ಲೂ ಸ್ಥಾನ ಪಡೆದಿದ್ದಾರೆ.

ಕನ್ನಡದ ಮತ್ತೊಬ್ಬ ಗ್ಲಾಮರ್ ಗೊಂಬೆ ಶ್ರೀಲೀಲಾ ಕನ್ನಡದಲ್ಲಷ್ಟೇ ಅಲ್ಲದೆ ಇತರೆ ಭಾಷೆಗಳಲ್ಲಿಯೂ ಬೇಡಿಕೆಯ ನಟಿ. ಪೆಳ್ಳಿ ಸಂದಡಿ ತೆಲುಗಿನಲ್ಲಿ ಚೊಚ್ಚಲ ಸಿನಿಮಾ. ಇದು ಅಷ್ಟು ಹಿಟ್‌ ಆಗದಿದ್ದರೂ ತನ್ನ ಬ್ಯೂಟಿಯೊಂದಿಗೆ ರವಿತೇಜ ಜೊತೆ ಧಮಾಕಾ, ನವೀನ್ ಪೋಲಿಶೆಟ್ಟಿ ಎದುರು ಅನಗನಗ ಒಕರಾಜು, ವೈಷ್ಣವ ತೇಜ್ ನಾಲ್ಕನೇ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಶ್ರದ್ಧಾ ಶ್ರೀನಾಥ್, ನಭಾ ನಟೇಶ್.. ಹೀಗೆ ಹಲವು ಕನ್ನಡ ನಾಯಕಿಯರು ಎಲ್ಲಾ ಇಂಡಸ್ಟ್ರಿಗಳಲ್ಲೂ ಹೆಸರು ಮಾಡಿದ್ದಾರೆ. ಅಂದಿಗೂ ಇಂದಿಗೂ ಸಿನಿ ಪರಿಶ್ರಮದಲ್ಲಿ ನಾಯಕಿಯರು ನೆನಪಾಗುವುದು ಕನ್ನಡದವರು ಮಾತ್ರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!