ನಿಮಗೆ ಮಳೆಯೆಂದರೆ ಇಷ್ಟವೇ??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಳೆಗಾಲ…ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ? ಅಲ್ವೇ? ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರಿಗೂ ಮಳೆಯೆಂದರೆ ಬಲು ಇಷ್ಟ. ತುಂತುರು ಮಳೆಗೆ ಮೈಯೊಡ್ಡಿ ಸ್ವೇಚ್ಛಯಿಂದ ಆಡುವ, ಮನಸ್ಸು ತಣಿಸಿಕೊಳ್ಳುವ ಮಜವೇ ಬೇರೆ. ಈ ಮಳೆಯಲ್ಲಿ ನೆನೆಯುವುದರಿಂದ ನಮ್ಮ ತ್ವಚೆ, ಕೂದಲಿಗೆ ತೊಂದರೆಯಾಗುತ್ತದೆಯೇ? ಈ ಸಂದೇಹ ಅನೇಕರಿಗೆ ಇದೆ.

ಮಳೆಯಲ್ಲಿ ನೆನೆಯುವುದರಿಂದ ಮನಸ್ಸು ದೇಹ ಹಗುರವಾಗುತ್ತದೆ ಎಂಬುದೇನೋ ನಿಜ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನಿರಂತರ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾಲಿನ್ಯದಿಂದ ತುಂಬಿಹೋಗಿದೆ. ವಾಹನಗಳ ಹೊಗೆ, ಕೈಗಾರಿಕೆಗಳಿಂದ ಉಗುಳುವ ಹೊಗೆಯಲ್ಲಿರುವ ರಾಸಾಯನಿಕಗಳು ಈ ಮಳೆ ಹನಿಯೊಂದಿಗೆ ಬೆರೆತು ಆಮ್ಲೀಯ ಗುಣಗಳನ್ನು ಪಡೆದುಕೊಳ್ಳುವುದು ಅಷ್ಟೇ ಸಹಜ. ಇದು ಕೆಲವೊಮ್ಮೆ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರದಿರದು.

ಸೂಕ್ಷ್ಮ ಚರ್ಮ ಹೊಂದಿದವರು ಮಳೆನೀರಿನಿಂದ ಆದಷ್ಟು ದೂರ ಇರುವುದು ಉತ್ತಮ. ಕೆಲವೊಮ್ಮೆ ತುರಿಕೆ, ಜಿಗುಟಿನ ಅನುಭವ ಆಗುವ ಸಾಧ್ಯತೆಗಳಿವೆ. ಚರ್ಮದ ಮೇಲ್ಪದರವನ್ನು ಹಾನಿಮಾಡುವ ಸಂಭವವೂ ಹೆಚ್ಚಿದೆ. ಇದರಿಂದಾಗಿ ಕೂದಲ ಆರೋಗ್ಯಕ್ಕೂ ತೊಂದರೆಯುಂಟಾಗುವುದು. ಅನಿವಾರ್ಯ ಸಂದರ್ಭ ಮಳೆ ನೀರಿನಲ್ಲಿ ನೆನೆದದ್ದೇ ಆದರೆ ತಕ್ಷಣ ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ಸ್ನಾನ ಮಾಡಲೇಬೇಕು. ನಂತರ ಚರ್ಮಕ್ಕೆ ಶುದ್ಧ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!