Theatre Story | ಹರ್ಷನ ಕಥೆ ಮುಂದೆ ಏನಾಗುತ್ತೆ ಎನ್ನುವ ಹೊತ್ತಿಗೆ ವರೂಧಿನಿಯ ನಿಜ ರೂಪ ಬಯಲಾಗುತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕನ್ನಡದ ಕಿರುತೆರೆಯಲ್ಲಿ ಕನ್ನಡದ ಪ್ರೀತಿಯ ಮೂಲಕ ಮನೆ ಮಾತಾಗಿರುವ ʼಕನ್ನಡತಿʼ ಧಾರವಾಹಿಯು ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ, ಹಾಗಾದ್ರೆ ಹರ್ಷ ಭುವಿಯ ಪಾತ್ರ ಮುಂದೆ ಹೇಗಿರತ್ತೆ ಎನ್ನುವ ಹೊತ್ತಿಗೆ ವರೂಧಿನಿ ಹರ್ಷನ ಕೈಲಿ ಸಿಕ್ಕಿಬಿದ್ದಿದ್ದಾಳೆ.

ಕುತೂಹಲ ಮತ್ತು ಮನೋರಂಜನೆಯೊಂದಿಗೆ ಪ್ರೇಕ್ಷಕರ ಮನವನ್ನು ಗೆದ್ದಿರುವ ಕನ್ನಡತಿ ಧಾರವಾಹಿಯು
ಹರ್ಷ ಮತ್ತು ಭುವಿಯ ಬಾಳಲ್ಲಿ ಯಾವ ನಿಲುವನ್ನು ನೀಡುತ್ತದೆ ಮತ್ತು ಈ ವರೂಧಿನಿ ಅವರ ಬಾಳಲ್ಲಿ ಸುಮ್ನಿರುತ್ತಾಳಾ ? ಎಂಬ ಆಲೋಚನೆ ಇತ್ತು. ಆದರೆ ಹರ್ಷ ಮತ್ತು ಭುವಿಗೆ ವಿಚ್ಛೇದನ ನೀಡಿಸಲು ಯೋಜನೆ ಹಾಕಿಕೊಂಡಿರುವ ವರೂಧಿನಿ ಈಗ ವಕೀಲರೊಂದಿಗೆ ಹರ್ಷನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದೀಗ ಮುಂದೆ ಏನಾಗುತ್ತದೆ ? ವರೂಧಿನಿಯ ಬಂಡವಾಳ ಬಯಲಾಗುತ್ತಾ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!