ಅಭಿಮಾನಿಗಳ ಮನಸ್ಸು ಗೆದ್ದ ಕನ್ನಡಿಗ: 11 ವರ್ಷದ ಬಾಲಕನ ಜೀವ ಉಳಿಸಲು 31 ಲಕ್ಷ ರೂ. ದೇಣಿಗೆ ನೀಡಿದ ಕೆಎಲ್ ರಾಹುಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಕ್ರಿಕೆಟ್ ತಂಡದ ಬ್ಯಾಟ್ಸಮನ್ , ಕನ್ನಡಿಗ ಕೆಎಲ್ ರಾಹುಲ್ ಅವರು ತಮ್ಮ ಬ್ಯಾಟಿಂಗ್ ಮೂಲಕ ಈಗಾಗಲೇ ಅದೆಷ್ಟೋ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದೀಗ ಅವರು ಸಮಾಜಮುಖಿ ಕೆಲಸದ ಮೂಲಕವೂ ಮತ್ತೆ ಜನರ ಪ್ರೀತಿ ಗಳಿಸಿದ್ದಾರೆ.

ಹೌದು, ಕೆಎಲ್ ರಾಹುಲ್ ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ 11 ವರ್ಷದ ಮಗುವಿಗೆ ಸಹಾಯ ಮಾಡಿದ್ದಾರೆ. ಮಗುವಿನ 31 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

ವರದ್ ನಲ್ವಾಡೆ ಎಂಬ ಬಾಲಕನಿಗೆ ತುರ್ತಾಗಿ ಮೂಳೆ ಮಜ್ಜೆಯ ಕಸಿ ಮಾಡಬೇಕಾಗಿತ್ತು. ಆದರೆ ಅವರ ಪೋಷಕರು ಮಧ್ಯಮ ವರ್ಗದವರಾಗಿದ್ದು, ಚಿಕಿತ್ಸೆಗಾಗಿ ಎನ್‌ಜಿಒ ಮೂಲಕ ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ಮಾಹಿತಿ ತಿಳಿದ ಕೆಎಲ್ ರಾಹುಲ್ ಮಗುವಿಗೆ ಸಹಾಯ ಮಾಡಿದ್ದಾರೆ.

ಐದನೇ ತರಗತಿಯಲ್ಲಿ ಓದುತ್ತಿರುವ ವರದ್ ಅವರನ್ನು ಮುಂಬೈನ ಜಸ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ವರದ್ ಅವರ ಚಿಕಿತ್ಸೆಗೆ ಅಸ್ಥಿಮಜ್ಜೆ ಕಸಿ ಒಂದೇ ಮಾರ್ಗವಾಗಿತ್ತು. ಹೀಗಾಗಿ ಈ ಮಾಹಿತಿ ಪಡೆದ ರಾಹುಲ್ ನ 31 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಗುವಿನ ಸಹಾಯಕ್ಕೆ ನಿಂತರು.

ಈ ಕುರಿತು ಮಾತನಾಡಿದ ಕೆಎಲ್ ರಾಹುಲ್, ‘ನನಗೆ ವರದ್ ಬಗ್ಗೆ ತಿಳಿದಾಗ, ನನ್ನ ತಂಡ ಗಿವ್ ಇಂಡಿಯಾ ಎನ್‌ಜಿಒ ಸಂಸ್ಥೆಯನ್ನು ಸಂಪರ್ಕಿಸಿ,. ಇದರಿಂದ ನಾವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಯಿತು.
ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದ್ದು, ವರದ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಲಿದ್ದಾರೆ ಎಂದು ಭಾವಿಸುತ್ತೇವೆ.ಈ ನನ್ನ ಕೊಡುಗೆ ಹೆಚ್ಚು ಹೆಚ್ಚು ಜನರು ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದರು .

ಕೆಎಲ್ ರಾಹುಲ್‌ ಸಹಾಯಕ್ಕೆ ವರದ್ ತಾಯಿ ಧನ್ಯವಾದ ಹೇಳಿದ್ದಾರೆ. ಕೆ.ಎಲ್.ರಾಹುಲಿ ಅವರ ಸಹಾಯವಿಲ್ಲದಿದ್ದರೆ ಇಷ್ಟು ದಿನದಲ್ಲಿ ಮಗನ ಅಸ್ಥಿಮಜ್ಜೆ ಕಸಿ ಅಸಾಧ್ಯವಾಗುತ್ತಿತ್ತು. ತನ್ನ ಮಗನನ್ನು ರಕ್ಷಿಸಲು ಭಾರತೀಯ ಕ್ರಿಕೆಟಿಗನೊಬ್ಬ ಬರುತ್ತಾನೆ ಎಂದು ನಾನು ಕನಸು ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!