ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾ ಪುರುಷರ ತಂಡದ ಹೆಡ್ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ನೇಮಕಗೊಂಡಿದ್ದಾರೆ.
ಒಂದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ದೊಡ್ಡ ಗಣೇಶ್ ಅವರ ಮಾರ್ಗದರ್ಶನದಲ್ಲಿ ಕೀನ್ಯಾ ತಂಡ ಉತ್ತಮ ಪ್ರದರ್ಶನ ನೀಡಿದ್ರೆ, ಒಪ್ಪಂದ ವಿಸ್ತರಣೆ ಆಗುವ ಸಾಧ್ಯತೆ ಇದೆ.
ಈ ಬಗ್ಗೆ ಕ್ರಿಕೆಟ್ ಕೀನ್ಯಾ ಸಿಇಒ ರೊನಾಲ್ಡ್ ಬುಕುಸಿ ಪ್ರಕಟಣೆ ಹೊರಡಿಸಿದ್ದಾರೆ.
ಭಾರತದ ದಿಗ್ಗಜ ದೊಡ್ಡ ಗಣೇಶ್ ಆಟಗಾರನನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದೊಡ್ಡ ಗಣೇಶ್ ಅವರ ಮುಂದಾಳತ್ವದಲ್ಲಿ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಎಂದಿದ್ದಾರೆ. ಕೀನ್ಯಾ ತಂಡ 2011ರಲ್ಲಿ ಕೊನೆ ಬಾರಿ ಐಸಿಸಿ ವಿಶ್ವಕಪ್ ಆಡಿದೆ.
24ನೇ ವಯಸ್ಸಿಗೆ ಟೀಮ್ ಇಂಡಿಯಾ ಪರ ಆಡಿದ್ದ ದೊಡ್ಡ ಗಣೇಶ್, 4 ಟೆಸ್ಟ್, 1 ಏಕದಿನ ಪಂದ್ಯಗಳಲ್ಲಿ ತಂಡವನ್ನ ಪ್ರತಿನಿಧಿಸಿದ್ರು. 104 ಫಸ್ಟ್ ಕ್ಲಾಸ್ ಪಂದ್ಯಗಳಿಂದ 365, 89 ಲಿಸ್ಟ್ ಎ ಪಂದ್ಯಗಳಿಂದ 128 ವಿಕೆಟ್ ಕಬಳಿಸಿದ್ದಾರೆ.