ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಉದಯಪುರದಲ್ಲಿ ನಡೆದ ಹತ್ಯೆಯ ಕೊಲೆಗಡುಕರನ್ನು ಗಲ್ಲಿಗೇರಿಸಬೇಕೆಂದು ಕನ್ಹಯ್ಯಾ ಲಾಲ್ ಕುಟುಬಸ್ಥರು ಒತ್ತಾಯಿಸಿದ್ದಾರೆ. ಅಮಾನತುಗೊಂಡ ಬಿಜೆಪಿ ನಾಯಕ ನೂಪುರ್ ಅವರನ್ನು ಬೆಂಬಲಿಸುವ ವಿಷಯವನ್ನು ಪೋಸ್ಟ್ ಮಾಡಿದಕ್ಕಾಗಿ ನಿನ್ನೆ ಇಬ್ಬರು ಕಿರಾತಕರು ನನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಅವರಿಗೆ ಮರಣದಂಡನೆ ವಿಧಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕನ್ಹಯ್ಯಾ ಪತ್ನಿ ಶರ್ಮಾ ಮನವಿ ಮಾಡಿದ್ದಾರೆ.
ಕನ್ಹಯ್ಯ ಲಾಲ್ ಪುತ್ರ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ತಂದೆಯನ್ನು ಕೊಂದ ಪಾಪಿಗಳ ಎನ್‌ಕೌಂಟರ್ ಆಗಬೇಕು ಇಲ್ಲವೇ ಅವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ಇಂತಹ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸುವಂತಾಗಬೇಕು ಎಂದಿದ್ದಾರೆ.
ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಇದೀಗ ಅನಾಥವಾಗಿ ದುಃಖದ ಮಡುವಿನಿಂದ ತುಂಬಿದೆ. ಕನ್ಹಯ್ಯ ಲಾಲ್ ಪತ್ನಿ ಮತ್ತು ಪುತ್ರ ಆಕ್ರಂದನ ಮುಗಿಲು ಮುಟ್ಟಿದೆ.