ಕಾನ್ಪುರ ಹಿಂಸಾಚಾರ: 40 ಮಂದಿಯ ಛಾಯಾಚಿತ್ರ ಬಿಡುಗಡೆಗೊಳಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾನ್ಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 40 ಮಂದಿಯ ಛಾಯಾಚಿತ್ರಗಳಿರುವ ಪೋಸ್ಟರ್​ನ್ನು ಉತ್ತರ ಪ್ರದೇಶದ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ಕಿಡಿಗೇಡಿಗಳ ಬಗ್ಗೆ ಮಾಹಿತಿ ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡುವಂತೆ ವಾಟ್ಸಪ್ ನಂಬರ್ ನೀಡಲಾಗಿದ್ದು, ಮಾಹಿತಿ ನೀಡುವವರ ಗುರುತು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ 38 ಜನರನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ನಲ್ಲಿ 1,000 ಹೆಸರಿಲ್ಲದ ವ್ಯಕ್ತಿಗಳಿದ್ದಾರೆ. ಆರೋಪಿಗಳನ್ನು ಬಂಧಿಸಲು ಸಹಕಾರ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜೂನ್ 3 ರಂದು ಕಾನ್ಪುರ ನಗರದ ಯತೀಂಖಾನಾ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಸಂಚು ರೂಪಿಸಿದ ಪ್ರಮುಖ ಆರೋಪಿ ಜಾಫರ್ ಹಶ್ಮಿ ಮತ್ತು ಆತನ 3 ಸಹಚರರು ಸೇರಿದಂತೆ 40 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ 1,000 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದರ ಮಾಸ್ಟರ್ ಮೈಂಡ್ ಹಯಾತ್ ಜಾಫರ್ ಹಶ್ಮಿ ಅವರ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು 141 ವಾಟ್ಸಪ್ ಗ್ರೂಪ್‌ಗಳನ್ನು ಪತ್ತೆ ಮಾಡಿದ್ದಾರೆ. ನಗರದ ವಿವಿಧ ಪ್ರದೇಶಗಳಿಂದ ಎಂಎಂಎ ಜೋಹರ್ ಅಭಿಮಾನಿಗಳ ಸಂಘ ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳನ್ನು ಗಲಭೆಗೆ ಕರೆಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!