‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣ್ಸ್ತಿದಾರೆ ಅನುಪಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದಾ ಟ್ರಡೀಷನಲ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ಅನುಪಮಾ ಪರಮೇಶ್ವರನ್ ಇದೇ ಮೊದಲ ಬಾರಿಗೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಅನುಪಮಾ ಪರಮೇಶ್ವರನ್ ಅವರು ತೆರೆಮೇಲೆ ಕಿಸ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೇ ಮೊದಲ ಬಾರಿಗೆ ಅವರು ಆ ರೀತಿಯ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಟ್ರೇಲರ್ ಗಮನ ಸೆಳೆದಿದೆ.ಕಿಸ್ಸಿಂಗ್ ಸೀನ್ಸ್‌ಗಳು ಹೆಚ್ಚಿರುವ ಸಿನಿಮಾಗಳನ್ನು ಅನುಪಮಾ ಆರಿಸಿದ್ದೇ ಕಡಿಮೆ.ಇದೀಗ ಡಿಜೆ ಟಿಲ್ಲು ಸಿನಿಮಾ ಸೀಕ್ವೆನ್ಸ್ ಟಿಲ್ಲು ಸ್ಕ್ವೇರ್‌ನಲ್ಲಿ ಅನುಪಮಾ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

2015ರಲ್ಲಿ ಅನುಪಮಾ ಚಿತ್ರರಂಗಕ್ಕೆ ಕಾಲಿಟ್ಟರು. ‘ಪ್ರೇಮಂ’ ಅವರ ಮೊದಲ ಚಿತ್ರ. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಅನುಪಮಾ ಖ್ಯಾತಿ ಹೆಚ್ಚಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ.ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಫ್ಯಾನ್ಸ್‌ನಿಂದ ಪಾಸಿಟಿವ್ ರಿಯಾಕ್ಷನ್ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!