ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಶ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಷ್ಟೋ ಜನರು ಫಿಶ್ ತಿನ್ಬೇಕು ಅಂದ್ರೆ ಮಂಗಳೂರಿಗೆ ಹೋಗಬೇಕು ಅಂತ ಅನ್ಕೋತಾರೆ. ಫಿಶ್ ಅಲ್ಲಿ ನಾವು ಫಿಶ್ ಫ್ರೈ, ಫಿಶ್ ಕರ್ರಿ, ಫಿಶ್ ಕಬಾಬ್ ಇಂತಹ ಫುಡ್ ಗಳನ್ನ ಎಲ್ಲರೂ ತಿಂದೆ ಇರುತ್ತಾರೆ. ಆದರೆ ಫಿಶ್ ಸೂಪ್ ಟ್ರೈ ಮಾಡಿದ್ದೀರಾ? ಇಲ್ಲ ಅನ್ನೋದಾದರೆ ಇವತ್ತೇ ಒಮ್ಮೆ ಟ್ರೈ ಮಾಡಿ ನೋಡಿ. ಹಾಗಾದರೆ ಬನ್ನಿ ನೋಡೋಣ ಫಿಶ್ ಸೂಪ್ ಮಾಡುವುದು ಹೇಗೆ ಅಂತ..
ಬೇಕಾಗುವ ಪಧಾರ್ಥಗಳು:
ಈರುಳ್ಳಿ – 1
ಬೆಳ್ಳುಳ್ಳಿ – 1
ಖಾರದಪುಡಿ – 1 ಚಮಚ
ಚಿಕನ್ ಬ್ರಾಥ್ – 1/2 ಚಮಚ
ಜೀರಿಗೆ – 1 ಚಮಚ
ಟೊಮೆಟೊ ರಸ – ೧೧/೨ ಕಪ್
ಕಾಳು ಮೆಣಸು – ರುಚಿಗೆ
ನಿಮ್ಮ ಆಯ್ಕೆಯ ಮೀನು – 1/2 ಕಪ್
ಫಿಶ್ ಸೂಪ್ ಮಾಡುವ ವಿಧಾನ:
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಹಚ್ಚಿದ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಬೆಳ್ಳುಳ್ಳಿ ಹಾಗೂ ಖಾರದಪುಡಿ ಸೇರಿಸಿ 2 ನಿಮಿಷ ಕೈ ಆಡಿಸಿ.
ಅದಕ್ಕೆ ಚಿಕನ್ ಬ್ರಾಥ್, ಕಾಳುಮೆಣಸು, ಜೀರಿಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಚೆನ್ನಾಗಿ 20 ನಿಮಿಷ ಕುದಿಸಿ. ನಂತರ ಅದಕ್ಕೆ ಟೊಮೆಟೊ ಹಾಗೂ ಮೀನಿನ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ. ಇನ್ನ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ 5 ನಿಮಿಷ ಕುದಿಸಿ. ನಂತರ ಸ್ಟೌ ಆಫ್ ಮಾಡಿ ಒಂದು ಬೌಲ್ನಲ್ಲಿ ಹಾಕಿ ಸರ್ವ್ ಮಾಡಿದ್ದಾರೆ ರುಚಿಕರವಾದ ಫಿಶ್ ಸೂಪ್ ಸವಿಯಲು ಸಿದ್ಧ.