Monday, January 30, 2023

Latest Posts

ಅಭಿಷೇಕ್‌ ಅಂಬರೀಶ್‌ ಚಿತ್ರಕ್ಕೆ ಕಾಂತಾರ ನಟಿ ಸಪ್ತಮಿ ಗೌಡ ನಾಯಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಂತಾರ ಸಿನಿಮಾ ಮೂಲಕ ಮನೆ ಮಾತಾದ ನಟಿ ಸಪ್ತಮಿ ಗೌಡ ಅವರಿಗೆ ಇದೀಗ ಮತ್ತೊಂದು ಚಿತ್ರದಿಂದ ಆಫರ್ ಬಂದಿದ್ದು, ಈ ಮೂಲಕ ಚಿತ್ರರಂಗದಲ್ಲಿ ಸಖತ್‌ ಡಿಮ್ಯಾಂಡ್‌ ಶುರುವಾಗಿದೆ.

ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ಅವರ ಕಾಳಿ ಸಿನಿಮಾದಲ್ಲಿ ಸಪ್ತಮಿ ಗೌಡ ಬಣ್ಣ ಹಚ್ಚಲಿದ್ದಾರೆ ಈಗಾಗಲೇ ನಟಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಪೈಲ್ವಾನ್‌, ಗಜಕೇಸರಿ, ಹೆಬ್ಬುಲಿ ಚಿತ್ರವನ್ನು ನಿರ್ದೇಶಿಸಿರುವ ಕೃಷ್ಣ ಅವರು ಕಾಳಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಾಳಿ ಸಿನಿಮಾ ಈಗಾಗಲೇ ಟೈಟಲ್ ಪೋಸ್ಟರ್‌ ಹಂಚಿಕೊಂಡಿದ್ದು, ನಟಿಯ ಹೆಸರನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದರು. ಇದೀಗ ಈ ಚಿತ್ರದ ನಾಯಕಿಯ ಹೆಸರು ಬಹಿರಂಗೊಂಡಿದೆ.

ಇನ್ನು ಸಪ್ತಮಿ ಗೌಡ ಅವರಿಗೆ ಪರಭಾಷೆಯಿಂದ ಆಫರ್ಸ್ ಬರುತ್ತಿವೆ ಎಂದು ಅವರು ಈಗಾಗಲೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕಾವೇರಿ ನದಿ ಗಲಾಟೆಯಲ್ಲಿ ನಡೆದಂತಹ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಭಿಷೇಕ್‌ ಅವರ ನಾಲ್ಕನೇ ಚಿತ್ರ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!