ಪುಷ್ಪ ದಾಖಲೆ ಮುರಿದ ಕಾಂತಾರ, ಒಟ್ಟಾರೆ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಯಶಸ್ಸನ್ನು ತಡೆಯೋರು ಯಾರೂ ಇಲ್ಲ ಎನ್ನುವ ಮಟ್ಟಿಗೆ ಸಿನಿಮಾ ಹಿಟ್ ಆಗಿದೆ.

ಹೊಂಬಾಳೆ ಬ್ಯಾನರ್‌ಗೆ ಭರ್ಜರಿ ಲಾಭ ತಂದುಕೊಟ್ಟಿರುವ ಕಾಂತಾರ ಸಿಕ್ಕಾಪಟ್ಟೆ ಹೆಸರು ಮಾಡಿದ ಪುಷ್ಪ ಸಿನಿಮಾ ಗಳಿಕೆಯ ದಾಖಲೆಯನ್ನೂ ಮುರಿದಿದೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಬರೋಬ್ಬರಿ 305 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಆದರೆ ಕಾಂತಾರ ಈ ದಾಖಲೆ ಮುರಿದಿದ್ದು, 307 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಸಿನಿಮಾದಲ್ಲಿ ಕಥೆ ಚೆನ್ನಾಗಿದ್ದರೆ ಅದನ್ನು ಇಷ್ಟಪಡದವರೇ ಇಲ್ಲ ಎನ್ನುವುದಕ್ಕೆ ಕಾಂತಾರ ಉದಾಹರಣೆಯಾಗಿದೆ. ಕನ್ನಡದಲ್ಲಿ ಮಾಡಿದ ಸಿನಿಮಾವನ್ನು ವಿಶ್ವವೇ ಮೆಚ್ಚಿಕೊಂಡಿದ್ದು, ತಂಡವನ್ನು ಹೊಗಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!