50 ದಿನ ಪೂರೈಸಿದ ಕಾಂತಾರ: ಪಂಜುರ್ಲಿ,ಗುಳಿಗ ದೈವಗೆ ಯಶಸ್ಸು ಅರ್ಪಿಸಿದ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕಾಂತಾರ. ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚಿ ಏಳು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ.

ವಿಶ್ವದಲ್ಲಿ ಸದ್ದು ಮಾಡಿದ್ದ ‘ಕಾಂತಾರ’ ಇಂದು (ನವೆಂಬರ್ 18) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

50 ದಿನಗಳನ್ನು ಪೂರೈಸಿದ ಸಿನಿಮಾ ಈಗಲೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ದಾಖಲೆ ನಿರ್ಮಿಸುತ್ತಿದೆ.

ಎಲ್ಲಾ ಭಾಷೆಗಳಿಂದಳೂ ಸುಮಾರು 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದೇ ಖುಷಿಯಲ್ಲೇ ರಿಷಬ್ ಶೆಟ್ಟಿ ಖುಷಿಯಲ್ಲಿ ಟ್ವೀಟ್ ಮಾಡಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಅಭೂತಪೂರ್ವ ಯಶಸ್ಸನ್ನು ನೀಡಿದ್ದಕ್ಕೆ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹಾಗೇ ಪಂಜೂರ್ಲಿ ಹಾಗೂ ಗುಳಿಗ ದೈವವನ್ನು ಸ್ಮರಿಸಿದ್ದಾರೆ.’ ಇದು ನಮ್ಮ ಪಾಲಿಗೆ ದೈವ ಭಾವನೆಯುಳ್ಳ ಸಂಭ್ರಮ. ವಿಶ್ವದಾದ್ಯಂತ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಈ ಗೆಲುವನ್ನು ಗಳಿಸಿ, ಒಪ್ಪಿಕೊಂಡು ಬದುಕುತ್ತಿದ್ದೇವೆ. ನಾವು ಪಂಜುರ್ಲಿ ಹಾಗೂ ಗುಳಿಗ ದೈವದ ಆಶೀರ್ವಾದಕ್ಕೆ ಭಾಜನರಾಗಿದ್ದೇವೆ. ಈ ಕ್ರೋಧವನ್ನು ಭೇದಿಸಲು ಸಾಧ್ಯವೇ ಇಲ್ಲ’ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಇಲ್ಲಿವರೆಗೂ ‘ಕಾಂತಾರ’ ಗಳಿಕೆಯನ್ನು ಕಂಡು ಬೇರೆ ಬೇರೆ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಭಾರತದಲ್ಲಿ ಈ ಸಿನಿಮಾ 350 ಕೋಟಿ ರೂ. ಸಮೀಪದಲ್ಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ‘ಕಾಂತಾರ’ ಇದೂವರೆಗೂ 344 ಕೋಟಿ ರೂ. ಗಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!