Sunday, November 27, 2022

Latest Posts

ಅಂತಾರಾಷ್ಟ್ರೀಯ ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲೂ ಈಗ ಕನ್ನಡದ ಕಾಂತಾರದ್ದೇ ಹವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಯಶಸ್ಸು ದೇಶದೆಲ್ಲೆಡೆ ಹಬ್ಬಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಂತಾರ ಸದ್ದು ಮಾಡುತ್ತಿದೆ. ಪ್ರತಿಷ್ಠಿತ ಫ್ರಂಟ್‌ಲೈನ್ ಮ್ಯಾಗಜಿನ್‌ನಲ್ಲಿ ಕನ್ನಡದ ಸೂಪರ್ ಹಿಟ್ ಚಲನಚಿತ್ರ ಕಾಂತಾರವನ್ನು ಕವರ್ ಪೇಜ್‌ನಲ್ಲಿ ಬಳಸಲಾಗಿದೆ.

ಫ್ರಂಟ್ ಪೇಜ್‌ನಲ್ಲಿ ಕಾಂತಾರ ಸಿನಿಮಾದ ಫೋಟೊ ಬಳಸುವುದರ ಜೊತೆಗೆ ಅದ್ಭುತ ಕಾಂತಾರ ಎಂಬ ಶೀರ್ಷಿಕೆಯಡಿ ಮುಖಪುಟದಲ್ಲಿ ಕಾಂತಾರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೊಗಳು ಫ್ರಂಟ್‌ಲೈನ್ ಮ್ಯಾಗಜಿನ್‌ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!