ಕಾಂತಾರ ಸೂಪರ್ ಸಕ್ಸಸ್, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 300ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಿನಿಮಾ ಕಾಂತಾರ ಬಾಕ್ಸ್ ಆಫೀಸ್‌ನ 300 ಕೋಟಿ. ರೂ. ಕ್ಲಬ್ ಸೇರಿದೆ. ಕನ್ನಡದಲ್ಲಿ ಸಿನಿಮಾ ಸೂಪರ್ ಹಿಟ್ ಆಗಿದ್ದು, ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗಿದೆ.

ಸಿನಿಮಾ ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, ರಿಷಭ್ ಶೆಟ್ಟಿ ತಂಡ ಖುಷಿಯಲ್ಲಿ ಬೀಗುತ್ತಿದೆ. ಬಾಲಿವುಡ್‌ನ ಸಾಕಷ್ಟು ಸಿನಿಮಾಗಳನ್ನು ಕಾಂತಾರ ಹಿಂದಿಕ್ಕಿದೆ. ಕಾಂತಾರ ಹವಾ ಮುಗಿಯುವವರೆಗೂ ಬೇರೆ ಸಿನಿಮಾ ರಿಲೀಸ್‌ಗೆ ನಿರ್ಮಾಪಕರು ಹಿಂದು ಮುಂದು ನೋಡುತ್ತಿದ್ದಾರೆ. ಕಾಂತಾರ ಇನ್ನೂ ಕೆಲವು ವಾರ ಹೌಸ್‌ಫುಲ್ ಪ್ರದರ್ಶನ ಕಾಣುತ್ತದೆ ಎಂದು ಸಿನಿಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!