ತುಳುವಿನಲ್ಲೂ ತೆರೆ ಮೇಲೆ ಬರಲು ಸಜ್ಜಾದ ಕಾಂತಾರ: ಡೇಟ್ ಕೂಡ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷೆಗಳಲ್ಲಿ ಭರ್ಜರಿ ಹಿಟ್ ಕಂಡ ಕಾಂತಾರ ಸಿನಿಮಾ ಇದೀಗ ತುಳುವಿನಲ್ಲೂ ತೆರೆ ಮೇಲೆ ಬರಲು ಸಜ್ಜಾಗಿದೆ. ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.

ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ `ಕಾಂತಾರ’ ತುಳುನಾಡಿನ ದೈವದ ಕಥೆ ಆಧಾರಿತ ಸಿನಿಮಾವಾಗಿದ್ದು, ಹಾಗಾಗಿ ತುಳು ಪ್ರೇಕ್ಷಕರಿಗಾಗಿ `ಕಾಂತಾರ’ ಚಿತ್ರ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಸದ್ಯ ಚಿತ್ರದ ಝಲಕ್ ಎಂಬಂತೆ ಟ್ರೈಲರ್ ಕೂಡ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ.

ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣ `ಕಾಂತಾರ’ ತುಳು ವರ್ಷನ್ ಚಿತ್ರವನ್ನು ಡಿಸೆಂಬರ್ 2ರಂದು 2022ಕ್ಕೆ ಭಾರತದಲ್ಲಿ ತೆರೆ ಕಾಣುತ್ತಿದೆ. ನವೆಂಬರ್ 25ರಂದು ವಿದೇಶದಲ್ಲಿ ಸಿನಿಮಾ ತೆರೆ ಕಾಣುತ್ತಿದೆ.

ಕಾಂತಾರ ಈಗಾಗಲೇ 50 ದಿನ ಪೂರೈಸಿ 400 ಕೋಟಿಗೂ ಅಧಿಕ ಕಲೆಕ್ಷನ್ ಹೊಸ ದಾಖಲೆ ಬರೆದಿದೆ. ಒಟಿಟಿಯಲ್ಲೂ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!