ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲು, ಮೊಸರಿನ ದರ ಹೆಚ್ಚಳ ಬೆನ್ನಲ್ಲೇ ಹೋಟೆಲ್ ಉಪಹಾರಗಳ ದರಗಳನ್ನು ಹೆಚ್ಚಳವಾಗುತ್ತಾ ಎಂಬ ಗೊಂದಲಗಳಿಗೆ ಇದೀಗ ಉತ್ತರ ಸಿಕ್ಕಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ , ಇಂದಿನಿಂದ ಹಾಲು, ಮೊಸರಿನ ದರ 2 ರೂ ಹೆಚ್ಚಳವಾಗಿದೆ. ಆದ್ರೇ ಹೋಟೆಲ್ ಆಹಾರ, ಕಾಫಿ, ಟೀ ಬೆಲೆಗಳನ್ನು ಈ ಕೂಡಲೇ ಹೆಚ್ಚಳ ಮಾಡುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಕೆಎಂಎಫ್ ನಿಂದ ಹಾಲು, ಮೊಸರಿನ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 2 ರೂ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಜಾರಿಗೆ ಬಂದ ಕಾರಣ ನಂದಿನ ಟೋನ್ಡ್ ಹಾಲಿನ ದರ ಲೀಟರ್ ಗೆ ರೂ.37 ರಿಂದ 39ಕ್ಕೆ ಹೆಚ್ಚಳವಾಗಿದೆ.