Thursday, December 8, 2022

Latest Posts

ಆರನೇ ದಿನವೂ ಕಾಂತಾರಾ ಹೌಸ್‌ಫುಲ್, ಗೆದ್ದೇ ಬಿಟ್ರು ರಿಷಭ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗ ಎಲ್ಲಿ ನೋಡಿದರೂ ರಿಷಭ್ ಶೆಟ್ಟಿಯ ಕಾಂತಾರ ಸಿನಿಮಾದ್ದೇ ಸದ್ದು. ವಿಭಿನ್ನ ಸಿನಿಮಾಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರೋ ರಿಷಭ್ ಶೆಟ್ಟಿ, ತಾವು ಡಿಫ್ರೆಂಟ್ ಎಂದು ಈ ಬಾರಿ ಕೂಡ ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾಂತಾರಾ ಹವಾ ಹೆಚ್ಚಾಗಿದ್ದು, ಸಿನಿಮಾ ನೋಡದವರೇ ಇಲ್ಲ ಎನ್ನುವಂತಾಗಿದೆ. ಸಿನಿಮಾ ರಿಲೀಸ್ ಆಗಿ ಆರು ದಿನಗಳಾಗಿದ್ದು, ಆರನೇ ದಿನವೂ ಸಿನಿಮಾ ಹೌಸ್‌ಫುಲ್ ಆಗಿದೆ.

ಹಬ್ಬದ ರಜೆಗಳು ಇರುವ ಕಾರಣ ಸಿನಿಮಾ ನೋಡುವ ಮಂದಿ ಹೆಚ್ಚಾಗಿದ್ದಾರೆ. ಇನ್ನು ವೀಕೆಂಡ್ ಹತ್ತಿರ ಇದ್ದು, ಸಿನಿಮಾ ನೋಡುವವರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಈವರೆಗೂ ಕಾಂತಾರಾ ಸಿನಿಮಾ ರಿವ್ಯೂ ಸಖತ್ತಾಗಿಯೇ ಇದ್ದು, ಸಿನಿಮಾ ಜನ ಮೆಚ್ಚಿದ್ದಾರೆ, ರಿಷಭ್ ಶೆಟ್ಟಿ ಗೆದ್ದಿದ್ದಾರೆ ಎಂದೇ ಹೇಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!