ವಿದೇಶಗಳಲ್ಲಿ ಅಬ್ಬರಿಸುತ್ತಿದೆ ಕಾಂತಾರ: ಅಮೆರಿಕಾದಲ್ಲಿ ರಂಗಿತರಂಗ ಲೈಫ್‌ಟೈಮ್ ಕಲೆಕ್ಷನ್ ಉಡೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶ ವಿದೇಶಗಳಲ್ಲೀಗ ಒಂದು ಸದ್ದು , ಅದುವೇ ಕಾಂತಾರ.. ಕಾಂತಾರ… ಈಗ ಎಲ್ಲೆಡೆ ಅಬ್ಬರದಿಂದ ಕಾಂತಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ಚಿತ್ರ ಶುರುವಿಂದಲೂ ಅಬ್ಬರಿಸುತ್ತಲೇ ಇದ್ದು, ದಾಖಲೆಯತ್ತ ಮುನ್ನುಗ್ಗುತ್ತಿದೆ.

ಕನ್ನಡದಲ್ಲಿ ಮಾತ್ರ ತೆರೆಕಂಡು ಅಬ್ಬರಿಸಿದ ಕಾಂತಾರ ಚಿತ್ರವನ್ನು ವೀಕ್ಷಿಸಿದ ಹೊರ ರಾಜ್ಯಗಳ ಸಿನಿ ರಸಿಕರು ತಮ್ಮ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಿ ಇಂಥ ಒಳ್ಳೆಯ ಚಿತ್ರಗಳು ಎಲ್ಲೆಡೆ ತಲುಪಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಹೊರ ರಾಜ್ಯಗಳ ಸಿನಿ ಪ್ರೇಕ್ಷಕರ ಬೃಹತ್ ಪ್ರತಿಕ್ರಿಯೆಗೆ ಸ್ಪಂದಿಸಿದ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿದೆ.

ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಮೆರಿಕಾ ಹಾಗೂ ಇಂಗ್ಲೆಂಡ್‌ ದೇಶಗಳಲ್ಲಿ ಚಿತ್ರ ಯಶಸ್ವಿ ಮೂರನೇ ವಾರಕ್ಕೆ ಪ್ರವೇಶಿಸುವತ್ತ ದಾಪುಗಾಲಿಟ್ಟಿದೆ.ಮೆರಿಕಾದಲ್ಲಿ ಮೊದಲ ವಾರಕ್ಕಿಂತ ಮೂರನೇ ವಾರ ಕಾಂತಾರಕ್ಕೆ ಹೆಚ್ಚು ಪ್ರದರ್ಶನಗಳು ಕೂಡ ಲಭಿಸಲಿವೆ. ಇನ್ನು ಅಕ್ಟೋಬರ್ 10ರ ಸೋಮವಾರಕ್ಕೆ ಕಾಂತಾರ ಅಮೆರಿಕಾದಲ್ಲಿ ರಂಗಿತರಂಗ ಚಿತ್ರದ ಜೀವಮಾನ ಕಲೆಕ್ಷನ್ ಅನ್ನು ಹಿಂದಿಕ್ಕಿ ಅಮೆರಿಕಾ ನೆಲದಲ್ಲಿ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ.

2015ರಲ್ಲಿ ಬಾಹುಬಲಿಯಂತಹ ದೈತ್ಯ ಸಿನಿಮಾ ಎದುರಿಗೆ ಬಿಡುಗಡೆಗೊಂಡ ರಂಗಿತರಂಗ ಅಮೆರಿಕಾದಲ್ಲಿ ಒಟ್ಟು 315,098 ಡಾಲರ್ ಕಲೆಕ್ಷನ್ ಮಾಡಿತ್ತು. ಇದು ಅಂದಿಗೆ ಕನ್ನಡ ಚಿತ್ರವೊಂದು ಅಮೆರಿಕಾ ನೆಲದಲ್ಲಿ ಮಾಡಿದ್ದ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಕಾಂತಾರ ಮುರಿದಿದ್ದು, ಸೋಮವಾರದ ಸಮಯಕ್ಕೆ ಕಾಂತಾರ 341,897 ಡಾಲರ್ ಗಳಿಕೆ ಮಾಡಿದೆ.

ಇನ್ನು ಕಾಂತಾರ ಚಿತ್ರ ಅಮೆರಿಕಾದಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರದ ದಾಖಲೆ ಮುರಿಯುವ ನಿರೀಕ್ಷೆ ಇದೆ. ಕಾಂತಾರ ಕೂಡ ಕೆಜಿಎಫ್ ರೀತಿಯೇ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿರುವುದರಿಂದ ಅಮೆರಿಕಾ ಕಲೆಕ್ಷನ್ ದಾಖಲೆಯನ್ನು ಮುರಿಯಲಿದೆ ಎಂದು ನಿರೀಕ್ಷೆ ಹೆಚ್ಚುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!