ಕಾಂತಾರ ಮೆಚ್ಚಿದ ಕೇಂದ್ರ ಸಚಿವೆ: ಗರುಡ ಮಾಲ್ ನಲ್ಲಿ ಸಿನಿಮಾ ನೋಡಿದ ನಿರ್ಮಲಾ ಸೀತಾರಾಮನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಇಡೀ ವಿಶ್ವ ಕಾಂತಾರ ಸಿನಿಮಾ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನಸಾಮಾನ್ಯರು ಮಾತ್ರವಲ್ಲದೇ ರಾಜಕಾರಿಣಿಗಳು, ಸೆಲೆಬ್ರಿಟಿಗಳು ಕೂಡ ಸಿನಿಮಾ ಕಂಡು ಫಿದಾ ಆಗಿದ್ದಾರೆ.

ಇದೀಗ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕಾಂತಾರ ಸಿನಿಮಾ ನೋಡಿದ್ದಾರೆ.
ಕಾಂತಾರ ಚಿತ್ರ ನೋಡಲು ಬೆಂಗಳೂರಿನ ಗರುಡ ಮಾಲ್ ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ಶಾಸಕ ಗರುಡಚಾರ್ ದಂಪತಿ ಸ್ವಾಗತಿಸಿದ್ದಾರೆ.

ಸಿನಿಮಾ ನೋಡಿದ ಬಳಿಕ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಿನಿಮಾ ನೋಡಿದ ಬಳಿಕ ಅದ್ಭುತ ಚಿತ್ರ ನಿರ್ಮಿಸಿದ ನಟ ನಿರ್ದೇಶಕ ರಿಶಬ್ ಶೆಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂತಾರ ಸಿನಿಮಾ ತುಳುವನಾಡು ಹಾಗೂ ಕರಾವಳಿಯ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಂಬಿಸುತ್ತಿದೆ. ರಿಶಭ್ ಶೆಟ್ಟಿ ಈ ಅದ್ಭುತ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ ಎಂದಿದ್ದಾರೆ. ನಿರ್ಮಾಲಾ ಸೀತಾರಾಮನ್, ತಮ್ಮ ಆಪ್ತರು, ಸ್ವಯಂ ಸೇವಕರು ಸೇರಿದಂತೆ ಕೆಲ ಮಾರ್ಗದರ್ಶಕರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಟ್ವೀಟ್ ಬೆನ್ನಲ್ಲೇ ರಿಷಬ್ ಶೆಟ್ಟಿ ಹಣಕಾಸು ಸಚಿವರಿಗೆ ಧನ್ಯವಾದ ಹೇಳಿದ್ದಾರೆ.

ಸೆಪ್ಟಂಬರ್ 30 ರಂದು ರಿಲೀಸ್ ಆಗಿದ್ದ ಕಾಂತಾರ ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿದ್ದು ಪ್ಯಾನ್-ಇಂಡಿಯನ್ ಚಲನಚಿತ್ರವನ್ನಾಗಿ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಮುರಿಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!