ಕಾಂತಾರ ಒಟಿಟಿ ರಿಲೀಸ್ ದಿನಾಂಕ ಮುಂದೂಡಿಕೆ, ಇದಕ್ಕಿದೆ ದೊಡ್ಡ ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಒಟಿಟಿಗೆ ಬರುತ್ತಿದೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದರು.

ಸಿನಿಮಾ ಮನೆಯಲ್ಲಿಯೇ ಕೂತು ಇನ್ನೊಮ್ಮೆ ನೋಡಬಹುದು ಎಂದು ಜನ ಕಾತರರಾಗಿದ್ದರು. ಅಂದುಕೊಂಡಂತೆ ಸಿನಿಮಾ ಇದೇ ತಿಂಗಳ 18 ರಂದು ರಿಲೀಸ್ ಆಗಬೇಕಿತ್ತು.

ಆದರೆ ರಿಲೀಸ್ ಡೇಟ್ ಮುಂದೂಡುವನಿರ್ಧಾರವನ್ನು ನಿರ್ಮಾಪಕರು ಮಾಡಿದ್ದಾರೆ. ಸಿನಿಮಾ ಥಿಯೇಟರ್‌ಗಳಲ್ಲಿ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಈಗಲೇ ಒಟಿಟಿಗೆ ಸಿನಿಮಾ ಬರೋದು ಬೇಡ ಎನ್ನುವುದು ನಿರ್ಮಾಪಕರ ನಿರ್ಧಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!