ನವಾಜುದ್ದೀನ್ ಸಿದ್ದಿಕಿ ಮನೆಯಲ್ಲಿ ಕಾಂತಾರ ಟೀಮ್: ಅದ್ಭುತ ಎಂದ ಬಾಲಿವುಡ್ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಟ ರಿಷಬ್ ಶೆಟ್ಟಿ ಕಾಲಿಗೆ ಚಕ್ರ ಕಟ್ಟಿದ್ದಂತೆ ಅಲ್ಲಿ ಇಲ್ಲಿ ಓಡಾಡುತ್ತಿದ್ದು, ಇಡೀ ವಿಶ್ವದಲ್ಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇತ್ತೀಚೆಗೆ ರಿಷಬ್ ಶೆಟ್ಟಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರನ್ನು ಕೂಡ ಭೇಟಿಯಾಗಿದ್ದು ಹಲವು ವಿಚಾರಗಳನ್ನು ಮಾತನಾಡಿದ್ದಾರೆ.


ಇವರು ತಮ್ಮ ಮುಂಬರುವ ಚಿತ್ರ ‘ಹಡ್ಡಿ’ಗಾಗಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಸಭೆಯನ್ನು ಆಯೋಜಿಸಿದ್ದರು.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನವಾಜುದ್ದೀನ್ ಸಿದ್ದಿಕಿ ಫೋಟೋ ಶೇರ್‌ ಮಾಡಿದ್ದಾರೆ. ಕಾಂತಾರ ತಂಡವು ಜೊತೆಗಿತ್ತು.
‘ನನ್ನ ಮನೆಯಲ್ಲಿ ರಿಷಬ್‌ ಶೆಟ್ಟಿ ಮತ್ತು ಕಾಂತಾರ ತಂಡದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಇದು ತುಂಬಾ ಅದ್ಭುತವಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.


ಆಶ್ಚರ್ಯಕರ ಸಂಗತಿಯೆಂದರೆ ರಿಷಬ್‌ಶೆಟ್ಟಿ ಮತ್ತು ನನಗೆ ತುಂಬಾ ಸಾಮ್ಯತೆ ಇದೆ. ಇಬ್ಬರು ಸಿಕ್ಕಾಪಟ್ಟೆ ಮಾತನಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ವೈರಲ್‌ ಪೋಸ್ಟ್‌ಗೆ ಸಿಕ್ಕಾಪಟ್ಟೆ ಕಮೆಂಟ್‌ಗಳು ಬರುತ್ತಿವೆ. ‘ಲೆಜೆಂಡ್‌ಗಳು ಇಲ್ಲಿವೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!