ಸಂಕ್ರಾಂತಿ ಸಂಭ್ರಮ ಹೆಚ್ಚಿಸಲು ನಿಮ್ಮ ಮನೆಗೆ ಬರಲಿದೆ ಕಾಂತಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದಲ್ಲಿ ಸದ್ದು ಮಾಡಿರುವ ಸಿನಿಮಾ ಕಾಂತಾರ 100 ದಿನ ಪೂರೈಸಿದ ಖುಷಿಯಲ್ಲಿದ್ದು, ಇದರ ಜೊತೆಗೆ ಟಿವಿ ಪರದೆಯಲ್ಲಿ ಮಿಂಚಲು ಕೂಡ ಸಜ್ಜಾಗಿದೆ.

ಈಗಾಗಲೇ ತೆರೆ ಮೇಲೆ ಆರ್ಭಟಿಸಿ, ಓಟಿಟಿ ಯಲ್ಲೂ ಸದ್ದು ಮಾಡಿರುವ ಸಿನಿಮಾ ಟಿವಿ ಪರೆದೆ ಗೆ ಕಾಲಿಟ್ಟಿದ್ದು,, ಅಬ್ಬರಿಸಲು ಸಜ್ಜಾಗಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ `ಕಾಂತಾರ’ ಸಿನಿಮಾ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, . ಸಂಕ್ರಾಂತಿ ಹಬ್ಬದಂದು ಸಿನಿಮಾ ಪ್ರಸಾರವಾಗುವ ಮೂಲಕ ಫ್ಯಾನ್ಸ್‌ಗೆ ವಾಹಿನಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!