ಹಾಲಿವುಡ್​ ನಲ್ಲೂ ನೆಪೋಟಿಸಂ ಸದ್ದು: ಈ ಕುರಿತು ನಟ ಟಾಮ್​ ಹ್ಯಾಂಕ್ಸ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೆಪೋಟಿಸಂ ಸಿನಿಮಾ ರಂಗದಲ್ಲಿ ಮುಗಿಯದ ಚರ್ಚೆ. ಸೆಲೆಬ್ರಿಟಿಗಳ ಮಕ್ಕಳಿಗೆ ಬೇಗ ಅವಕಾಶ ಸಿಗುತ್ತದೆ ಎಂದು ಅನೇಕರು ಬೊಬ್ಬೆ ಹೊಡೆಯುತ್ತಾರೆ. ಸ್ಯಾಂಡಲ್​ವುಡ್​, ಬಾಲಿವುಡ್​ ಮಾತ್ರವಲ್ಲ ಹಾಲಿವುಡ್​ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ.

ಹಾಲಿವುಡ್​ನ ಖ್ಯಾತ ನಟ ಟಾಮ್​ ಹ್ಯಾಂಕ್ಸ್​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಕಿರಿಯ ಪುತ್ರ ಟ್ರೂಮನ್​ ಹ್ಯಾಂಕ್ಸ್​ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಅದರ ಇದೀಗ ನೆಪೋಟಿಸಂ ಟೀಕೆ ಜೋರಾಗಿದೆ.ಇದನ್ನು ಟಾಮ್​ ಹ್ಯಾಂಕ್ಸ್ ಅವರು ಹೇಳಿಕೊಂಡಿದ್ದಾರೆ.

‘ಕಾಸ್ಟ್​ ಅವೇ’, ‘ಫಾರೆಸ್ಟ್​ ಗಂಪ್​’, ‘ಸೇವಿಂಗ್ ಪ್ರೈವೇಟ್​ ರಿಯಾನ್​’ ಸೇರಿದಂತೆ ಹಲವು ಗಮನಾರ್ಹ ಸಿನಿಮಾ ನೀಡಿದ ಟಾಮ್​ ಹ್ಯಾಂಕ್ಸ್​ ಅವರಿಗೆ ಈಗ 66 ವರ್ಷ ವಯಸ್ಸು. ಇಂದಿಗೂ ಕೂಡ ಬಹುಬೇಡಿಕೆಯ ನಟನಾಗಿ ಟಾಮ್​ ಹ್ಯಾಂಕ್ಸ್​ ಗುರುತಿಸಿಕೊಂಡಿದ್ದಾರೆ.

ಇನ್ನು ಜನವರಿ 13ರಂದುಟಾಮ್​ ಹ್ಯಾಂಕ್ಸ್​ ನಟನೆಯ ಹೊಸ ಸಿನಿಮಾ ‘ಎ ಮ್ಯಾನ್​ ಕಾಲ್ಡ್​ ಆಟ್ಟೋ’ ಅಮೆರಿಕದ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾಗೆ ಟಾಮ್​ ಹ್ಯಾಂಕ್ಸ್​ ನಿರ್ಮಾಪಕ ಕೂಡ ಹೌದು. ಅವರ ಕಿರಿಯ ಪುತ್ರ ಟ್ರೂಮನ್​ ಹ್ಯಾಂಕ್ಸ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ನೆಪೋಟಿಸಂ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಟಾಮ್​ ಹ್ಯಾಂಕ್ಸ್​ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ನಮ್ಮ ಕುಟುಂಬದ ವ್ಯವಹಾರ. ಮೊದಲಿನಿಂದಲೂ ನಾವು ಇದನ್ನೇ ಮಾಡಿಕೊಂಡು ಬಂದಿದ್ದೇವೆ. ಇದರಲ್ಲೇ ನನ್ನೆಲ್ಲ ಮಕ್ಕಳು ದೊಡ್ಡವರಾಗಿದ್ದು. ನಮ್ಮದು ಪ್ಲಂಬಿಂಗ್​ ಅಥವಾ ಹೂವಿನ ಬಿಸ್ನೆಸ್ ಆಗಿದ್ದರೆ ಅದರಲ್ಲೇ ನಮ್ಮ ಇಡೀ ಕುಟುಂಬ ತೊಡಗಿರುತ್ತಿತ್ತು ಎಂದು ಟಾಮ್​ ಹ್ಯಾಂಕ್ಸ್​ ಹೇಳಿದ್ದಾರೆ. ಸರ್​ ನೇಮ್​ ಯಾವುದು ಎಂಬುದು ಮುಖ್ಯ ಆಗುವುದಿಲ್ಲ. ಎಲ್ಲರೂ ಉತ್ತಮ ಕೆಲಸ ಮಾಡಲೇಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!