ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಟೀಕಿಸಿದ್ದಕ್ಕಾಗಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿರುದ್ಧ ಹಿರಿಯ ವಕೀಲ ಮತ್ತು ಸಂಸದ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಾಂಗವು ತನ್ನ ಕೆಲಸವನ್ನು ಮಾಡದಿದ್ದರೆ, ನ್ಯಾಯಾಂಗವು ಮಧ್ಯಪ್ರವೇಶಿಸಬೇಕು. ಅದನ್ನು ಮಾಡುವುದು ಅವರ ಹಕ್ಕು. ನ್ಯಾಯಾಂಗದ ಸ್ವಾತಂತ್ರ್ಯವು ಈ ದೇಶದ ಪ್ರಜಾಪ್ರಭುತ್ವಕ್ಕೆ ಮೂಲಭೂತವಾಗಿದೆ. ರಾಜ್ಯಸಭಾಧ್ಯಕ್ಷರಾಗಿ ರಾಜಕೀಯ ಮಾತನಾಡುವ ಹಾಗೂ ಸುಪ್ರೀಂ ಕೋರ್ಟ್‌ನ ಮಾತುಗಳನ್ನೇ ಅಸಾಂವಿಧಾನಿಕ ಎನ್ನುವ ವ್ಯಕ್ತಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಕಿಡಿಯಾಡಿದ್ದಾರೆ.
ರಾಜ್ಯಪಾಲರು ಉಲ್ಲೇಖಿಸುವ ಮಸೂದೆಗಳ ಕುರಿತು ರಾಷ್ಟ್ರಪತಿಗಳು ನಿರ್ಧರಿಸಲು ಮೂರು ತಿಂಗಳ ಕಾಲಾವಕಾಶ ನಿಗದಿಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಜಗದೀಪ್ ಧನ್ಕರ್ ಟೀಕಿಸಿದ್ದರು.