ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ರಾಜಸ್ಥಾನದ ಕರೌಲಿಯಲ್ಲಿ ಮರಳಿನ ರಾಶಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಜಿಲ್ಲೆಯ ಸಿಮಿರ್ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ವರರದಿ ಮಾಡಿವೆ.
ದೀಪಾವಳಿಗೂ ಮುನ್ನ ಮನೆಯ ಗೋಡೆಗಳಿಗೆ ಬಣ್ಣ ಬಳಿಯಲು ಕುಟುಂಬಸ್ಥರು ಮಣ್ಣು ಅಗೆಯಲು ಹೋದಾಗ ಈ ಘಟನೆ ನಡೆದಿದೆ. ಮಹಿಳೆಯರು ಮತ್ತು ಮಕ್ಕಳು 10 ಅಡಿಗೂ ಹೆಚ್ಚು ಮಣ್ಣು ಅಗೆಯಲು ಆರಂಭಿಸಿದ್ದು, ಮರಳು ರಾಶಿ ಅವರ ಮೇಲೆ ಬಿದ್ದಿದ್ದು ಅನಾಹುತ ಸಂಭವಿಸಿದೆ ಅವರ ಕೂಗು ಕೇಳಿದ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಕೆಲವರನ್ನು ರಕ್ಷಿಸಿದ್ದಾರೆ.
ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕರೌಲಿಯ ಸಪೋತ್ರಾ ಪ್ರದೇಶದ ಮೆಡ್‌ಪುರ ಗ್ರಾಮದಲ್ಲಿ ಮಣ್ಣು ಕುಸಿದು 3 ಮಹಿಳೆಯರು ಮತ್ತು 3 ಬಾಲಕಿಯರ ಸಾವು ದುಃಖಕರವಾಗಿದೆ, ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪವನ್ನು ದೇವರು ನೀಡಲಿ. ಈ ನಷ್ಟವನ್ನು ಭರಿಸುವ ಶಕ್ತಿ ಮತ್ತು ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡಿರುವ ಮಹಿಳೆಯರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.