ಶತ್ರುಗಳನ್ನು ಬಗ್ಗುಬಡಿದ ಕಾರ್ಗಿಲ್ ಪರ್ವತಕ್ಕೆ ಹೊಸ ನಾಮಕರಣ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ಥಾನದ ವಿರುದ್ಧದ 1999ರ ಆಪರೇಷನ್ ವಿಜಯ್ ಯುದ್ಧದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗನ್ನರ್‌ಗಳ ಗೌರವಾರ್ಥವಾಗಿ ಕಾರ್ಗಿಲ್‌ನ ಪರ್ವತಕ್ಕೆ `ಗನ್ ಹಿಲ್’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯ, 1999 ಜೂನ್ 20ರಂದು ಕಾರ್ಗಿಲ್ ಸೆಕ್ಟರ್‌ನ್ನು ಆಕ್ರಮಿಸಿಕೊಂಡ ಶತ್ರುಗಳನ್ನು ಕ್ಯಾಪ್ಟನ್ ವಿಕ್ರಮ್ ಬಾತ್ರಾ ನೇತೃತ್ವದ ತಂಡವು ಹೊಡೆದುರುಳಿಸಿತ್ತು. ಇದನ್ನು ಆಪರೇಷನ್ ವಿಜಯ್ ಎಂದು ಹೆಸರಿಸಲಾಯಿತು. ಭಾರತೀಯ ಸಶಸ್ತ್ರ ಪಡೆಗಳ ಸ್ಮರಣೆಗಾಗಿ ಕಾರ್ಗಿಲ್ ಶಿಖರಕ್ಕೆ ಗನ್‌ಹಿಲ್ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!