Saturday, August 13, 2022

Latest Posts

ಕರಿಪ್ಪುರ್ ನಿಲ್ದಾಣಗಳಲ್ಲಿ ಇಳಿಯಬೇಕಿದ್ದ ಆರು ವಿಮಾನಗಳು ನೆಡುಂಬಶ್ಶೇರಿಯಲ್ಲಿ ಲ್ಯಾಂಡಿಂಗ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು,  ಕರಿಪ್ಪುರ್ ನಿಲ್ದಾಣಗಳಲ್ಲಿ ಇಳಿಯಬೇಕಿದ್ದ ಆರು ವಿಮಾನಗಳು ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಇಳಿದಿವೆ.
ಕರಿಪ್ಪುರ್ ವಿಮಾನ ನಿಲ್ದಾಣ ಭಾಗದಲ್ಲಿ ಭಾರೀ ಮಳೆ, ಪ್ರತಿಕೂಲ ಹವಾಮಾನ ಕಾಣಿಸಿಕೊಂಡಿದ್ದು, ಜೊತೆಗೆ ಈ ನಿಲ್ದಾಣವು ಟೇಬಲ್ ಟಾಪ್ ಕೂಡಾ ಆಗಿರುವುದರಿಂದ ಇಲ್ಲಿ ಲ್ಯಾಂಡಿಂಗ್ ಅಪಾಯ ಎಂದು ಅರಿತ ವಿಮಾನಗಳು ಸಂಭಾವ್ಯ ಅಪಾಯ ತಪ್ಪಿಸಲು ನೆಡುಂಬಶ್ಶೇರಿಯತ್ತ ಮುಖಮಾಡಿವೆ.
ಶಾರ್ಜಾದಿಂದ ಆಗಮಿಸಿದ ಗಲ್ಫ್ ಏರ್, ಬಹ್ರೇನ್ ವಿಮಾನ, ದೋಹಾದಿಂದ ಬಂದ ಕತಾರ್ ಏರ್ವೇಸ್, ಅಬುಧಾಬಿಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಶಾರ್ಜಾದಿಂದ ಬಂದ ಏರ್ ಅರೇಬಿಯಾ ವಿಮಾನ ನೆಡುಂಬಶ್ಶೇರಿಯಲ್ಲಿ ಇಳಿದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಹವಾಮಾನ ಅನುಕೂಲಕರವಾಗಿದ್ದರೆ ಮಾತ್ರ ಈ ವಿಮಾನಗಳನ್ನು ಕರಿಪ್ಪೂರ್‌ನಲ್ಲಿ ಇಳಿಯಲು ಅವಕಾಶ ನೀಡಲಾಗುತ್ತದೆ. ಇಲ್ಲವಾದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss