Monday, August 8, 2022

Latest Posts

ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಶಿಕ್ಷೆ , 1,20,000ರೂ. ದಂಡ

ಹೊಸದಿಗಂತ ವರದಿ, ಮುಂಡಗೋಡ:

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ನ್ಯಾಯಾಲಯವು 20 ವರ್ಷ ಶಿಕ್ಷೆ 1,20,000ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಓರಲಗಿ ಗ್ರಾಮದ ಆರೋಪಿ ಶಿವಾನಂದ ಗೌಳೇರಗೆ ನ್ಯಾಯಾಲಯವು 20 ವರ್ಷ ಶಿಕ್ಷೆ 1,20,000ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಸೆಪ್ಟೆಂಬರ್ 2021ರಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಬಗ್ಗೆ ಪೊಲೀಸ್ ಪಿಎಸೈ ಬಸವರಾಜ ಮಬನೂರ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಸಿ.ಪಿ.ಐ ಎಸ್.ಎಸ್‌ಸಿಮಾನಿ ಅವರು ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪಿತನ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಎಪ್.ಟಿ.ಎಸ್.ಸಿ-ಐ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಾಲ್ವಾಡೆ ಅವರು ತೀಪು ನೀಡಿದ್ದಾರೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಶುಭಾ ಆರ್ ಗಾಂವಕರ ಅವರು ವಾದವನ್ನು ಮಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss