ಕಾರ್ಕಳ ಅತ್ಯಾಚಾರ ಪ್ರಕರಣ, ಸಂತ್ರಸ್ತೆ ರಕ್ತದಲ್ಲಿ ಡ್ರಗ್ಸ್ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಕಾರ್ಕಳದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಆಕೆಯ ರಕ್ತದ ಮಾದರಿಯಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ಎಸ್.ಪಿ. ಡಾ. ಅರುಣ್ ಕೆ. ಅವರು ಮಾಹಿತಿ ನೀಡಿದ್ದು, ಸಂತ್ರಸ್ತ ಯುವತಿಯ ರಕ್ತ ಪರೀಕ್ಷೆಯ ವರದಿಯಲ್ಲಿ ಡ್ರಗ್ಸ್ ಅಂಶ ಇರುವುದು ಪತ್ತೆಯಾಗಿದೆ. ಮೊದಲ ಆರೋಪಿ ಅಲ್ತಾಫ್‌ನ ರಕ್ತಪರೀಕ್ಷೆಯ ವರದಿ ಹಾಗೂ ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿ ಕ್ಸೇವಿಯರ್ ರಿಚರ್ಡ್‌ನ ರಕ್ತ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

ಯುವತಿಯ ರಕ್ತದ ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್‌ ಅಂಶ ಪತ್ತೆಯಾಗಿರುವ ಕಾರಣ ಆರೋಪಿ ಅಲ್ತಾಫ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಆತ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ ‘ಇದನ್ನೇ ಆ ಹುಡುಗಿಗೆ ನೀಡಿದ್ದು’ ಎಂದು ಹೇಳಿದ್ದಾನೆ. ಇದೀಗ ಆ ಪುಡಿಯನ್ನು ನಾವು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಯಾವ ಮಾದಕ ದ್ರವ್ಯ ಎಂಬುದನ್ನು ದೃಢೀಕರಿಸುತ್ತೇವೆ ಮತ್ತು ಅದನ್ನೇ ಹುಡುಗಿಗೆ ನೀಡಲಾಗಿತ್ತೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!