ಅಪ್ಪು ಕನ್ನಡಿಗರ ಹೃದಯದಲ್ಲಿ ಅಮರ: ಆರ್‌ಆರ್‌ಆರ್‌ ಫ್ರೀ- ರಿಲೀಸ್‌ ಇವೆಂಟ್‌ ನಲ್ಲಿ ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ
ಅತೀ ಶೀಘ್ರದಲ್ಲೇ ದೊಡ್ಡ ಕಾರ್ಯಕ್ರಮ ಆಯೋಜಿಸುವುವ ಮೂಲಕ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಆರ್ ಆರ್ ಆರ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಧಕರು ತಮ್ಮ ಸಾಧನೆಗಳ ಮೂಲಕ ಸಾವಿನ ನಂತರವೂ ಜೀವಂತವಾಗಿರುತ್ತಾರೆ. ಅಪ್ಪು ತಮ್ಮ ಸಾಧನೆಗಳ ಮೂಲಕ ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಸೂರ್ಯ ಚಂದ್ರರಿರುವವರೆಗೆ ಶಾಶ್ವತವಾಗಿರುತ್ತಾರೆ ಎಂದರು.
ಸಮಸ್ತ ಕನ್ನಡದ ಜನತೆಯ ಪರವಾಗಿ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ, ರಾಜಮೌಳಿ, ಹಾಗೂ ಜೂ ಎನ್ ಟಿ ಆರ್ ಅವರು ನಮ್ಮ ಕನ್ನಡನಾಡಿನವರು ಎನ್ನುವ ಹೆಮ್ಮೆ ನಮಗಿದೆ ಎಂದರು. ಆರ್ ಆರ್ ಆರ್ ಸ್ವಾತಂತ್ರ ಹೋರಾಟದ ಚಿತ್ರವಾದ್ದರಿಂದ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ನಾಡಿನವೀರವನಿತೆ ಕಿತ್ತೂರುರಾಣಿ ಚನ್ನಮ್ಮ ಬ್ರಿಟೀಷರ ವಿರುದ್ದ ರಣಕಹಳೆ ಮೊಳಗಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.
ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ ಎಲ್ಲ ಮಹನೀಯರ ಚರಿತ್ರೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ರಾಜಮೌಳಿ ಕೇವಲ ನಿರ್ದೇಶಕರಲ್ಲ ಅವರೊಬ್ಬ ಕ್ರಿಯೇಟರ್. ಪ್ರತಿಯೊಬ್ಬ ದೇಶಾಭಿಮಾನಿಯೂ ಆರ್ ಆರ್ ಆರ್ ಚಿತ್ರವನ್ನು ವೀಕ್ಷಿಸಬೇಕು. ಇದು ರಾಷ್ಟ್ರದ ಗೌರವದ ಚಿತ್ರವಾಗಿ ಹೊರಹುಮ್ಮಬೇಕು ಎಂದರು.
ಈ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಷಯ, ಈ ಚಿತ್ರವನ್ನು ದೇಶಕ್ಕಾಗಿ ಪ್ರಾಣ ಕೊಟ್ಟ ಮಹನೀಯರಿಗೆ ಅರ್ಪಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪುನಿತ್ ನಟನೆಯ ಚಿತ್ರಗಳ ಹಾಡುಗಳಿಗೆ ನೃತ್ಯ ಮಾಡುವಿದರ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರದಲ್ಲಿ ಆರ್ ಆರ್ ಆರ್ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ, ನಟರಾದ ಜೂನಿಯರ್ ಎನ್ ಟಿ ಆರ್, ರಾಮ್ ಚರಣ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!