ಗ್ಯಾರಂಟಿಗಳ ಉಸ್ತುವಾರಿಗೆ ವಿಶೇಷ ಅಧಿಕಾರಿಯಾಗಿ ಎಲ್.ಕೆ. ಅತೀಕ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಣಕಾಸು ಇಲಾಖೆಯ ವಿಶೇಷ ಕರ್ತವ್ಯದ ಮೇಲೆ ಎಲ್​ಕೆ ಅತಿಕ್ ಅವರನ್ನು ನಿಯೋಜನೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಎಲ್.ಕೆ. ಅತೀಕ್ ಅವರನ್ನು ಗ್ಯಾರಂಟಿ ಯೋಜನೆಗಳ ಮೇಲುಸ್ತುವಾರಿ ಅಧಿಕಾರಿಯನ್ನಾಗಿ (ತಾತ್ಕಾಲಿಕ ಹುದ್ದೆ) ನೇಮಿಸಲಾಗಿದೆ.

ಈ ಹುದ್ದೆಯನ್ನು ಆರ್ಥಿಕ ಇಲಾಖೆಯಲ್ಲಿ ಸೃಷ್ಟಿಸಲಾಗಿದೆ. ಇದಲ್ಲದೆ ಅವರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸ್ಥಾನವನ್ನೂ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಜೂನ್ 30 ರಿಂದ ಅತೀಕ್‌ ಅವರು ಹಣಕಾಸು ಇಲಾಖೆ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!