ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ವಿರುದ್ಧ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಡಬ್ಲ್ಯೂಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಭೂಷಣ್ ಸಿಂಗ್ ವಿರುದ್ಧ ಕ್ರೀಡಾಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು, ಒಂದು ಆರೋಪ ಸಾಬೀತಾದರೂ ಯಾವ ಶಿಕ್ಷೆಯನ್ನಾದರೂ ಸ್ವೀಕರಿಸಲು ತಯಾರಿದ್ದೇನೆ ಎಂದಿದ್ದಾರೆ.
ಕುಸ್ತಿಪಟುಗಳು ಗಂಗೆಯಲ್ಲಿ ಪದಕಗಳನ್ನು ಬಿಡಲು ಹೋದರೆ ನಾನೇನು ಮಾಡೋಕೆ ಸಾಧ್ಯ? ಎಲ್ಲಾ ರೀತಿ ತನಿಖೆಗೂ ಸ್ಪಂದಿಸಿದ್ದೇನೆ. ನಾನು ತಪ್ಪು ಮಾಡಿಲ್ಲ ಹಾಗಾಗಿ ಹೆದರುವುದಿಲ್ಲ ಎಂದಿದ್ದಾರೆ.