ಅತಿ ಹೆಚ್ಚು ಏರ್‌ಪೋರ್ಟ್ ಇರುವ ರಾಜ್ಯ ಕರ್ನಾಟಕ : ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳಿವೆ ಎಂದು ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಶಿವಮೊಗ್ಗ ಏರ್‌ಪೋರ್ಟ್ ಲೋಕಾರ್ಪಣೆಗೊಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಮಾನ ನಿಲ್ದಾಣ ಇರುವ ರಾಜ್ಯ ಕರ್ನಾಟಕವಾಗಿದೆ. ಒಟ್ಟಾರೆ 10 ವಿಮಾನ ನಿಲ್ದಾಣಗಳು ರಾಜ್ಯದಲ್ಲಿವೆ. ಬೆಂಗಳೂರು ನಗರದ ಮೆಟ್ರೋ ಸಂಪರ್ಕ ಕೇವಲ ಏಳು ಕಿ,ಮೀ ಇತ್ತು. ಆದರೆ ಇದೀಗ 70 ಕಿ.ಮೀ ಮೆಟ್ರೋ ರೈಲು ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ ಎಂದಿದ್ದಾರೆ.

ಭಾರತದಲ್ಲಿ 2014 ಕ್ಕಿಂತ ಮುಂಚೆ ಇದ್ದದ್ದು 74ವಿಮಾನ ನಿಲ್ದಾಣಗಳು ಮಾತ್ರ, ಈಗ ಅದರ ಸಂಖ್ಯೆ 148 ಆಗಿದೆ. ಮುಂದಿನ ಐದು ವರ್ಷದಲ್ಲಿ ಈ ಸಂಖ್ಯೆ 200 ಆಗಲಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!