FOOD and NUTRITION| ಪರಂಗಿ ಹಣ್ಣು ತಿಂದು ಬೀಜಗಳನ್ನು ಎಸೆಯುವವರು ಇದನ್ನು ಓದಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪರಂಗಿ ಹಣ್ಣು ತಿನ್ನಲು ಅಷ್ಟೇ ಅಲ್ಲ, ಆರೋಗ್ಯಕ್ಕೂ ಅನೇಕ ಲಾಭವನ್ನುಂಟು ಮಾಡುತ್ತದೆ. ಅನೇಕರು ಪಪ್ಪಾಯಿ ತಿಂದು ಬೀಜಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಈ ಹಣ್ಣನ್ನು ಬೆಳೆಯಲು ಬಯಸುವವರು ಈ ಬೀಜಗಳನ್ನು ಬಳಸುತ್ತಾರೆ. ಆದರೆ ಈ ಬೀಜವು ಇತರ ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹ ಉಪಯುಕ್ತವಾಗಿದೆ.

ಪಪ್ಪಾಯಿ ಬೀಜಗಳು ಕಪ್ಪು ಬಣ್ಣದಲ್ಲಿದ್ದು, ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ನೇರವಾಗಿ ತಿಂದರೆ ಕಹಿಯಾಗಿರುತ್ತದೆ. ಸಾಮಾನ್ಯವಾಗಿ ಬೀಜವನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿಮಾಡಿ ತಿನ್ನಲಾಗುತ್ತದೆ.

ಭಾರತದಲ್ಲಿ ಹೃದ್ರೋಗಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ವಯಸ್ಸಿನ ಬೇಧವಿಲ್ಲದೆ ಹೃದಯಾಘಾತದಿಂದ ಸಾಯುತ್ತಿರುವ ಸುದ್ದಿಯನ್ನು ನಾವು ಪ್ರತಿದಿನ ಕೇಳುತ್ತೇವೆ. ಈ ಸಂದರ್ಭದಲ್ಲಿ ಪಪ್ಪಾಯಿ ಬೀಜಗಳು ಜೀವ ಉಳಿಸುವ ಯಾವ ಮೂಲಿಕೆಗಿಂತ ಕಡಿಮೆಯಿಲ್ಲ. ಇದರ ಉತ್ಕರ್ಷಣ ನಿರೋಧಕಗಳು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಬೀಜಗಳ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಉರಿಯೂತವನ್ನು ಕಡಿಮೆ ಮಾಡಲು ಪಪ್ಪಾಯಿ ಬೀಜಗಳು ಬಹಳ ಪರಿಣಾಮಕಾರಿ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪಪ್ಪಾಯಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಿದೆ. ಇದರ ಗುಣಲಕ್ಷಣಗಳು ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!