ಕರ್ನಾಟಕ ವಿಧಾನಪರಿಷತ್‌: ವಿವಿಧ ಹುದ್ದೆಗಳ ನೇಮಕಾತಿಗೆ ಇಂದಿನಿಂದ ಎಕ್ಸಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಪರಿಷತ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ಇವತ್ತಿನಿಂದ ಅಂದರೆ ಮಾರ್ಚ್ 22ರಿಂದ 25ರವರೆಗೆ ಲಿಖಿತ ಪರೀಕ್ಷೆ ನಡೆಸುತ್ತಿದೆ.

ಒಂದೊಂದು ಹುದ್ದೆಗೆ ಒಂದೊಂದು ದಿನ ಪರೀಕ್ಷೆ ನಡೆಯಲಿದೆ. 4,868 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಇರುವ ವಸ್ತ್ರಸಂಹಿತೆ ಈ ಪರೀಕ್ಷೆಗೂ ಅನ್ವಯವಾಗಲಿದೆ. ಆ ಪ್ರಕಾರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ನಕಲು ಮಾಡಲು ಅವಕಾಶ ಇಲ್ಲದಂತೆ ಕ್ರಮಕೈಗೊಳ್ಳಲಾಗಿದೆ.

ಕಂಪ್ಯೂಟರ್ ನಿರ್ವಾಹಕರು, ಸಹಾಯಕ, ಕಿರಿಯ ಸಹಾಯಕ, ಹಿರಿಯ ಪ್ರೋಗ್ರಾಮರ್, ಡಾಟಾ ಎಂಟ್ರಿ ಸಹಾಯಕ ಸೇರಿದಂತೆ ಏಳು ಹುದ್ದೆಗಳಿಗೆ ಬೆಂಗಳೂರು ನಗರದ ಹತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!