ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ನೆರೆಯ ತಮಿಳುನಾಡಿನೊಂದಿಗೆ ಸ್ಪರ್ಧೆಯನ್ನು ಪ್ರೋತ್ಸಾಹಿಸಲು, ರಾಜ್ಯ ಪ್ರವಾಸೋದ್ಯಮ ಇಲಾಖೆಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹೊಗೇನಕಲ್ ಜಲಪಾತದ ಪ್ರವಾಸ ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ವಿವರವಾದ ವರದಿಯನ್ನು ರೂಪಿಸುತ್ತಿದೆ.
ಕಾವೇರಿ ನದಿಯಿಂದ ಸೃಷ್ಟಿಸಲ್ಪಟ್ಟ ಸುಂದರವಾದ ಜಲಪಾತಗಳಿಗೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರು ತಮಿಳುನಾಡಿನ ಧರ್ಮಪುರಿಗೆ ದೋಣಿ ಸವಾರಿ, ಚಾರಣ ಮತ್ತು ಜಲ ಕ್ರೀಡೆ ಆನಂದಿಸಲು ಹೋಗುತ್ತಾರೆ. ಕರ್ನಾಟಕದಿಂದ ಪ್ರವೇಶವಿದೆ, ಆದರೆ ಕಾವೇರಿ ವನ್ಯಜೀವಿ ಅಭಯಾರಣ್ಯ ಅರಣ್ಯ ಪ್ರದೇಶದ ಮೂಲಕ ನಿರ್ಬಂಧ ಏರಲಾಗಿದೆ.
“ರಾಜ್ಯದಿಂದ ಈ ಸ್ಥಳಕ್ಕೆ ಜನರ ಸಂಖ್ಯೆ ಹೆಚ್ಚಾಗುವುದನ್ನು ನಾವು ಬಯಸುತ್ತೇವೆ. ಅರಣ್ಯ ಇಲಾಖೆಯನ್ನು ಒಳಗೊಂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸುತ್ತೇವೆ. ಇದರಿಂದ ತಮಿಳುನಾಡಿನೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡುವುದಲ್ಲದೆ, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ” ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲಾಖೆಯ ಅಧಿಕಾರಿಗಳು ಅನುಮತಿಗಾಗಿ ಸರ್ಕಾರದ ಮುಂದೆ ಇಡಲು 12 ಕೋಟಿ ರೂ. ವೆಚ್ಚದ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ವರದಿಯು ಗಜೆಬೋ, ಪಾರ್ಕಿಂಗ್ ಸೌಲಭ್ಯ, ಮನರಂಜನಾ ಕೇಂದ್ರ, ವಿಶ್ರಾಂತಿ ಕೊಠಡಿಗಳು, ಫುಡ್ ಕೋರ್ಟ್ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ. ಇದರೊಂದಿಗೆ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಲ್ಲಿನ ಸೌಲಭ್ಯಗಳ ಸುಧಾರಣೆಗೆ ಯೋಜನಾ ವರದಿಯನ್ನು ಸಹ ಸಿದ್ಧಪಡಿಸಲಾಗುತ್ತಿದೆ.